Sunday, May 5, 2024
spot_imgspot_img
spot_imgspot_img

ಇರುಂದೂರು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಮತ್ತು ಮಲರಾಯಿ ದೈವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಸಂಪನ್ನ

- Advertisement -G L Acharya panikkar
- Advertisement -

ಇರುಂದೂರು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಮತ್ತು ಮಲರಾಯಿ ದೈವಸ್ಥಾನದಲ್ಲಿ ಬ್ರಹ್ಮಶ್ರೀ ಕುಂಟುಕುಡೇಲು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಶ್ರೀ ನಾಗಬ್ರಹ್ಮ ರಕ್ತೇಶ್ವರಿ ಮತ್ತು ಮಲರಾಯಿ ದೈವಗಳ ವಾರ್ಷಿಕ ಮಹೋತ್ಸವ ಮಾ. 5 ಮತ್ತು6 ರಂದು ಅದ್ದೂರಿಯಾಗಿ ನಡೆಯಿತು.

5-3-2022 ನೇ ಶನಿವಾರ ಶ್ರೀ ನಾಗಬ್ರಹ್ಮ, ಶ್ರೀ ರಕ್ತೇಶ್ವರಿ, ಹಾಗೂ ಶ್ರೀ ಮಲರಾಯಿ ಸನ್ನಿಧಿಯಲ್ಲಿ ವಿವಿಧ ವೈದಿಕ ವಿಧಿ-ವಿಧಾನಗಳು ಜರಗಿತು. ಸಂಜೆ ಊರ-ಪರವೂರ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು. ನಂತರ ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಯ್ಯ ಬಲ್ಲಾಳ್ ಅರಮನೆ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಹಲವು ಅತಿಥಿಗಳ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

ರಾತ್ರಿ ಅಮ್ಮ ಕಲಾವಿದರು ಮಂಗಳೂರು ಪ್ರಸ್ತುತ ಪಡಿಸಿದ ರಂಗ್‌ದ ರಾಜೆ ಸುಂದರ್ ರೈ ಮಂದಾರ ಹಾಗೂ ಪ್ರಸಿದ್ಧ ರಂಗ ಕಲಾವಿದರ ಅಭಿನಯದ ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆ ಪ್ರದರ್ಶನಗೊಂಡಿತು.

6-3-2022 ನೇ ಆದಿತ್ಯವಾರ ಬೆಳಗ್ಗೆ ಶ್ರೀ ಮಲರಾಯಿ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಹೋಮ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಂಜೆ ಶ್ರೀ ರಕ್ತೇಶ್ವರಿ ಸನ್ನಿಧಿಯಲ್ಲಿ ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ (ರಿ). ಇರುಂದೂರು ಮತ್ತು ಶ್ರೀ ನಾಗಬ್ರಹ್ಮ ಮಹಿಳಾ ಸಮಿತಿ ಇರುಂದೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಧ್ವನಿ ತರಂಗ ತಂಡ ವಿಟ್ಲ, ಪುರಂದರ ಮತ್ತು ಬಳಗದವರಿಂದ ಸಂಗೀತ ನೃತ್ಯ ವೈಭವ ನಡೆಯಿತು. ನಂತರ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ರಕ್ತೇಶ್ವರಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು. ಶ್ರೀ ರಕ್ತೇಶ್ವರಿ ಮತ್ತು ಗುಳಿಗ ದೈವದ ನೇಮೋತ್ಸವದ ನೇರಪ್ರಸಾರ ವಿಟಿವಿ ಚಾನೆಲ್‌ನಲ್ಲಿ ಪ್ರಸಾರಗೊಂಡಿತು.

- Advertisement -

Related news

error: Content is protected !!