Sunday, May 5, 2024
spot_imgspot_img
spot_imgspot_img

ಬಂಟ್ವಾಳ: ಸರಪಾಡಿ ನದಿಯಲ್ಲಿ ಮೊಸಳೆ ಪತ್ತೆ..?; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

- Advertisement -G L Acharya panikkar
- Advertisement -

ಬಂಟ್ವಾಳ : ಸರಪಾಡಿಯ ನೇತ್ರಾವತಿ ನದಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ನೇತ್ರಾವತಿ ನದಿಯಲ್ಲಿ ಈಜಲು ಹೋಗುವವರು ಅಥವಾ ನದಿ ಬದಿಗೆ ಹೋಗುವವರು ಎಚ್ಚರಿಕೆ ವಹಿಸುವಂತೆ ಹೇಳಿದ ಸಂದೇಶದ ಜೊತೆಗೆ ಒಂದು ವಿಡಿಯೋ ಹರಿದಾಡುತ್ತಿದೆ.

ಬಂಟ್ವಾಳದ ನೇತ್ರಾವತಿ ನದಿ ಎನ್ನಲಾದ ವಿಡಿಯೋಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ನೇತ್ರಾವತಿ ನದಿಯೇನಾ? ಎಂಬುವುದು ಖಚಿತವಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಯವರಲ್ಲಿ ವಿಚಾರಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಗ್ಗೆ ಮಾತ್ರ ತಿಳಿದಿದೆ, ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ಇದು ಮೊಸಳೆನಾ? ಅಥವಾ ಉಡ ಜಾತಿಯ ಪ್ರಾಣಿಯೋ? ಎಂಬ ಅನುಮಾನ ಮೂಡಿದೆ.

vtv vitla
- Advertisement -

Related news

error: Content is protected !!