Thursday, March 28, 2024
spot_imgspot_img
spot_imgspot_img

ಉಕ್ರೇನ್‌ ತೊರೆದ 60 % ಭಾರತೀಯ ವಿದ್ಯಾರ್ಥಿಗಳು..! ಭಾರತದ ಎರ್‌ಲಿಫ್ಟ್‌’ಗೆ ಭೇಷ್‌ ಎಂದ ಜಗತ್ತಿನ ಪ್ರಮುಖ ನಾಯಕರು..!

- Advertisement -G L Acharya panikkar
- Advertisement -

ನವದೆಹಲಿ: ಉಕ್ರೇನ್‌ನಲ್ಲಿದ್ದ ಒಟ್ಟು ಭಾರತೀಯ ವಿದ್ಯಾರ್ಥಿಗಳ ಪೈಕಿ 16 ಸಾವಿರದಷ್ಟು ಮಂದಿ ಆ ದೇಶವನ್ನು ತೊರೆದಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.

ಸುದ್ದಿ ಸಂಸ್ಥೆ ‘ಎಎನ್‌ಐ’ ಜೊತೆಗೆ ಮಾತನಾಡಿರುವ ಅವರು, ‘ ಉಕ್ರೇನ್‌ ತೊರೆಯುವಂತೆ ನಾವು ಮೊದಲ ಬಾರಿಗೆ ಸೂಚನೆ ನೀಡಿದಾಗ ಅಲ್ಲಿ ಅಂದಾಜು 20,000 ಭಾರತೀಯ ವಿದ್ಯಾರ್ಥಿಗಳಿದ್ದರು. ಆ ಪೈಕಿ 12,000 ಜನರು ಈಗಾಗಲೇ ಉಕ್ರೇನ್ ತೊರೆದಿದ್ದಾರೆ. ಇದು ಉಕ್ರೇನ್‌ನಲ್ಲಿರುವ ಒಟ್ಟಾರೆ ಭಾರತೀಯ ನಾಗರಿಕರ ಪೈಕಿ ಶೇ 60ರಷ್ಟು’ ಎಂದು ಶೃಂಗ್ಲಾ ತಿಳಿಸಿದರು.

ಭಾರತದ ಎರ್‌ಲಿಫ್ಟ್‌’ಗೆ ಭೇಷ್‌ ಎಂದ ಜಗತ್ತಿನ ಪ್ರಮುಖ ನಾಯಕರು..!

ಇನ್ನು ಈ ಆಪರೇಷನ್ ಗಂಗಾ ಮೂಲಕ ಭಾರತವು ತನ್ನ ಪ್ರಜೆಗಳನ್ನು ಏರ್‍ ಲಿಫ್ಟ್ ಮಾಡುತ್ತಿದೆ. ಯುದ್ಧಭೂಮಿಯಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಳ್ಳಲಾಗುತ್ತಿದೆ. ಭಾರತದ ಈ ನಡೆಗೆ ವಿದೇಶಿ ನಾಯಕರು ಭೇಷ್ ಎಂದಿದ್ದಾರೆ. ಪ್ರಧಾನಿ ಮೋದಿಯನ್ನು ಕೊಂಡಾಡಿದ್ದಾರೆ..! ಅಂತೆಯೇ ಮೋದಿಯ ಪಡೆಯ ನಾಯಕರು ಸಹಕರಿಸುತ್ತಿದ್ದಾರೆ. ಅಂದು ಸುಷ್ಮಾ ಸ್ವರಾಜ್ ಹೇಳಿದ ಮಾತು ಇಂದು ನಿಜ ಎನಿಸುವಂತಿದೆ.

- Advertisement -

Related news

error: Content is protected !!