

ಬೆಳ್ತಂಗಡಿ : ಉಜಿರೆ ಪಿಯು ಕಾಲೇಜು ಹಿಂಭಾಗದ ನಾಗರಾಜ ಕಾಂಪೌಂಡ್ ಏರಿಯಾದಲ್ಲಿನ ಶಂಕರ ಶೆಟ್ಟಿ ಎಂಬವರ ಮನೆಯ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ.
ಶ್ರೀ ದುರ್ಗಾ ನಿಲಯ ಎಂಬ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಆದರೆ ಈ ಮನೆಯವರು ಮೈಸೂರಿನಲ್ಲಿ ನೆಲೆಸಿದ್ದು, ಈ ಮನೆಗೆ ಬೀಗ ಹಾಕಿತ್ತು. ಒಂದು ವಾರದ ಹಿಂದೆ ಮನೆಯವರು ಬಂದಾಗ ಬಾವಿಯನ್ನು ಗಮನಿಸಿದ್ದರು. ಆದರೆ, ಇವರು ಮೃತ ದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು.

ಆದರೆ ನಿನ್ನೆಯಿಂದ ಯಾವುದೋ ಮೃತದೇಹದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಊರಿನವರು, ಇಂದು ಬಂದು ನೋಡಿದಾಗ ಬಾವಿಯಲ್ಲಿ ಮೃತ ದೇಹವಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಮನೆಯ ಮಾಲೀಕ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನಂತರ ಮುಳುಗು ತಜ್ಞರಾದ ಗಾಂಧಿನಗರದ ಶಿಯಾಬ್, ಸಂಜಯನಗರ ಇಸ್ಮಾಯಿಲ್, ಕುಂಟಿನಿ ರಝಕ್, ಕುಂಟಿನಿ ರಫೀಕ್, ಆಂಬುಲೆನ್ಸ್ ಚಾಲಕ ಜಲಿಲ್ ಬಾಬಾ ಅವರನ್ನು ಕರೆಸಿ ಶವ ಮೇಲಕ್ಕೆತ್ತಿದ್ದಾರೆ.
ಶವ ಗಂಡಸಿನದ್ದಾಗಿದ್ದು ಬಲ ಕೈಯಲ್ಲಿ ‘ಮಂಜುಳಾ’ ಎಂಬುವುದಾಗಿ ಟ್ಯಾಟು ಹಾಕಿದ್ದಾರೆ, ಶವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಗಾರಕ್ಕೆ ಸಾಗಿಸಿದ್ದು, ಘಟನಾ ಸ್ಥಳಕ್ಕೆ ಬೆಳ್ತಂಗಡಿ ಎಸ್ ಐ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ದಸರಾ ರಜೆಯಲ್ಲಿ ವಿಶೇಷ ತರಗತಿ: ಷರತ್ತುಗಳೊಂದಿಗೆ ಅನುಮತಿ ನೀಡಿದ ಶಾಲಾ ಶಿಕ್ಷಣ ಇಲಾಖೆ
- 180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಜೊತೆ ಪ್ರಧಾನಿ ಮೋದಿ ಮಾತುಕತೆ; ಶೀಘ್ರ ಚೇತರಿಕೆಗೆ ಹಾರೈಕೆ
- ಕಾಸರಗೋಡು: ಕಾರು-ಬೈಕ್ ನಡುವೆ ಭೀಕರ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು..!
- ಮಹಾರಾಷ್ಟ್ರದ ದಿವ್ಯಾಗರ್ ಬೀಚ್ ನಲ್ಲಿ ದುರಂತ: ಪ್ರವಾಸಕ್ಕೆ ಬಂದಿದ್ದ 8 ವಿದ್ಯಾರ್ಥಿಗಳು ಸಮುದ್ರದ ಪಾಲು
- ಮಹಿಳಾ ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ










