Thursday, May 9, 2024
spot_imgspot_img
spot_imgspot_img

ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರ ಬಂಧನ!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರನ್ನು ಮಹಿಳಾ ಠಾಣಾ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ ಆರೋಪಿಗಳು ಸಂದೀಪ್ ನಾಯ್ಕ, ವಿಘ್ನೇಶ್ ನಾಯ್ಕ ಎನ್ನಲಾಗಿದೆ.

ಅಪ್ರಾಪ್ತ ಬಾಲಕಿಯ ತಂದೆ, ತಾಯಿ ಕೆಲಸಕ್ಕೆ ಹೋದ ಸಮಯದಲ್ಲಿ ಆರೋಪಿಗಳು ಬಾಲಕಿಯ ಮನೆಗೆ ಬಂದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಆರೋಪಿ ಸಂದೀಪ್ ನಾಯ್ಕ ವಿವಾಹಿತನಾಗಿದ್ದು, ಈತ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದನು. ಇನ್ನೊಬ್ಬ ಆರೋಪಿ ವಿಘ್ನೇಶ್ ನಾಯ್ಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.

ಅಪ್ಪ, ಅಮ್ಮನನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿ ಬಾಲಕಿಯೊಂದಿಗೆ ಪ್ರತ್ಯೇಕವಾಗಿ ಬಂದು ದೌರ್ಜನ್ಯ ನಡೆಸಿರುವುದಾಗಿ ಬಾಲಕಿಯ ಪೋಷಕರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಇಬ್ಬರನ್ನು ಪೋಕ್ಸ್ ಕಾಯ್ದೆಯಡಿ ಬಂಧಿಸಲಾಗಿದೆ.

vtv vitla
- Advertisement -

Related news

error: Content is protected !!