Thursday, September 10, 2026
spot_imgspot_img
spot_imgspot_img

ಉಡುಪಿ: ರಾತ್ರೋರಾತ್ರಿ ಪಿಎಫ್‌ಐ ಕಚೇರಿಗೆ ದಾಳಿ; ದಾಖಲೆ ಪೊಲೀಸ್ ವಶಕ್ಕೆ

- Advertisement -
- Advertisement -

ಉಡುಪಿ: ಉಡುಪಿ ಪೊಲೀಸರು ರಾತ್ರೋರಾತ್ರಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ, ತಪಾಸಣೆ ಕೈಗೊಂಡು ಪಿಎಫ್‌ಐಗೆ ಸಂಬಂಧಿಸಿದ ದಾಖಲೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಿಎಫ್ ಐ ಮತ್ತು ಅದರ ಹಲವು ಸಹವರ್ತಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪಿಎಫ್ ಐ ತಮ್ಮ ಚಟುವಟಿಕೆಗಳಿಗೆ ಎಸ್ ಡಿಪಿಐ ಕಚೇರಿಗಳನ್ನು ಬಳಸಿಕೊಳ್ಳುತ್ತಿತ್ತು.

ಹೂಡೆ, ಗಂಗೊಳ್ಳಿ, ಉಡುಪಿಯಲ್ಲಿ ಎಸ್‌ಡಿಪಿಐ ಕಚೇರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಎಸ್‌ಡಿಪಿಐ ಮುಖಂಡ ನಜೀರ್ ಮತ್ತು ಬಶೀರ್ ಅವರ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಅವರ ಮನೆಗಳಿಗೆ ಬೀಗ ಹಾಕಿದ್ದರಿಂದ ಅವರು ಹಿಂತಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಹಿಂದೆ ರಾತ್ರೋರಾತ್ರಿ ಪಿಎಫ್‌ಐ ಮುಖಂಡರನ್ನು ಉಡುಪಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದರು.

- Advertisement -

Related news

error: Content is protected !!