Friday, June 19, 2026
spot_imgspot_img
spot_imgspot_img

ಉಡುಪಿ: ಸಾಕು ನಾಯಿಯನ್ನು ಎಳೆದೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

- Advertisement -
- Advertisement -

ನಗರ ಪ್ರದೇಶಕ್ಕೆ ಆಹಾರ ಅರಸಿಕೊಂಡು ಕಾಡು ಪ್ರಾಣಿಗಳು ಬರುತ್ತಿದೆ. ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಆಗಿಂದ್ದಾಗ ಚಿರತೆ ಕಾಣಿಸಿಕೊಳ್ಳುತ್ತಿರುವುದು ನಗರವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಮಣಿಪಾಲದ ಪರ್ಕಳದಲ್ಲಿ ಚಿರತೆ ಕಾಣಿಸಿಕೊಂಡಿದೆ.

ಅಂತೆಯೇ ಹೆರ್ಗ ಗ್ರಾಮದ ಗೋಳಿಕಟ್ಟೆಯಲ್ಲೂ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯ ನಿವಾಸಿ ಬಾಲಚಂದ್ರ ಕೆದ್ಲಾಯ ಅವರ ಮನೆಯ ಅಂಗಳದಲ್ಲಿ ಕುತ್ತಿಗೆಗೆ ಬೆಲ್ಟ್ ಹಾಕಿ ಕಟ್ಟಿದ್ದ ಸಾಕು ನಾಯಿಯನ್ನು ಎಳೆದೊಯ್ದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿದೆ.

ಈ ಹಿಂದೆಯೂ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು ನಾಟಿಕೋಳಿ, ಸಾಕುನಾಯಿಯನ್ನು ಚಿರತೆಗಳು ಎತ್ತೊಯ್ದಿದ್ದಿದ್ದವು. ಇದೀಗ ಮತ್ತೆ ಈ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸ್ಥಳೀಯ ನಾಗರಿಕರು ಆತಂಕದಲ್ಲಿದ್ದಾರೆ.

- Advertisement -

Related news

error: Content is protected !!