- Advertisement -
- Advertisement -



ಉಡುಪಿ: ಸೇಲ್ಸ್ ಮೆನ್ ನ ಗಮನ ಬೇರೆಡೆಗೆ ಸೆಳೆದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಬಳೆಗಳನ್ನುಇಬ್ಬರು ಮಹಿಳೆಯರು ಸೇರಿ ಕಳವು ಮಾಡಿರುವ ಘಟನೆ ಉಡುಪಿಯ ಸುಲ್ತಾನ್ ಡೈಮಂಡ್ & ಗೋಲ್ಡ್ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ನ.23ರಂದು ಸಂಜೆ ನಡೆದಿದೆ.

ಉಡುಪಿ ವಿದ್ಯಾಸಮುದ್ರ ರಸ್ತೆಯಲ್ಲಿರುವ ಸುಲ್ತಾನ್ ಡೈಮಂಡ್ & ಗೋಲ್ಡ್ ಆಭರಣ ಮಳಿಗೆಗೆ ಆಭರಣ ಖರೀದಿಸುವ ನೆಪದಲ್ಲಿ ಬಂದ ಬುರ್ಖಾ ಧರಿಸಿದ ಮಹಿಳೆಯರಿಬ್ಬರಿಗೆ ಮಳಿಗೆಯ ಮೊಹಮ್ಮದ್ ಮುಬಾರಕ್ ಚಿನ್ನದ ಬಳೆಗಳನ್ನು ತೋರಿಸಿದ್ದಾರೆ.

ಆದರೆ ಆರೋಪಿ ಮಹಿಳೆಯರಿಬ್ಬರು ಮುಬಾರಕ್ ಅವರ ಗಮನವನ್ನು ಬೇರೆಡೆಗೆ ಸೆಳೆದು ಒಟ್ಟು 60 ಗ್ರಾಂ ತೂಕದ 13 ಲಕ್ಷ ಮೌಲ್ಯದ 4 ಚಿನ್ನದ ಬಳೆಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಜ್ಯುವೆಲ್ಲರ್ಸ್ ಮಳಿಗೆಯ ಮ್ಯಾನೇಜರ್ ಮೊಹಮ್ಮದ್ ಅಜ್ಮಲ್ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.



- Advertisement -








