- Advertisement -
- Advertisement -


ಉಡುಪಿ: ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಳವು ಪ್ರಕರಣ ನಡೆದಿರುವುದರ ಬಗ್ಗೆ ಬೆಳಕಿಗೆ ಬಂದಿದ್ದು ಕಳ್ಳರು ನಗ -ನಗದು ದೋಚಿ ಪರಾರಿಯಾಗಿದ್ದಾರೆ.
ಉಡುಪಿ ನಗರದ ಗುಂಡಿಬೈಲು ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯ ದೊಡ್ಡಣಗುಡ್ಡೆಯಲ್ಲಿ ಕಳ್ಳತನ ನಡೆದಿರುವುದರ ಕುರಿತು ಪ್ರಕರಣ ದಾಖಲಾಗಿದೆ.
ದೊಡ್ಡಣ್ಣ ಗುಡ್ಡೆಯ ಒಂದು ಬಟ್ಟೆ ಮಳಿಗೆ ಮತ್ತು ಮೂರು ಜನರಲ್ ಶಾಪ್ ಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗ -ನಗದು ದೋಚಿ ಪರಾರಿಯಾಗಿದ್ದಾರೆ. ಉಡುಪಿ ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -








