Friday, June 5, 2026
spot_imgspot_img
spot_imgspot_img

ಉಡುಪಿ: ಹಿಮ್ಮುಖವಾಗಿ ಚಲಿಸಿ ಕಾರಿನ ಮೇಲೇರಿದ ಲಾರಿ

- Advertisement -
- Advertisement -

ಉಡುಪಿ: ಟ್ರ್ಯಾಕ್ ಚೇಂಜ್ ಮಾಡುವ ಭರದಲ್ಲಿ ಕಲ್ಲಿದ್ದಲು ಲೋಡ್ ಹೇರಿದ್ದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಹಿಂಬದಿಯಲ್ಲಿ ಟೋಲ್ ಕಟ್ಟಲು ಬರುತ್ತಿದ್ದ ಮಾರುತಿ ಝೆನ್ ಕಾರಿನ ಮೇಲೇರಿದ ಘಟನೆ ಉಡುಪಿ ಹೆಜಮಾಡಿ ಸಮೀಪದ ಟೋಲ್ ಗೇಟ್‌ನಲ್ಲಿ ನಡೆದಿದೆ.

ಮಂಗಳೂರಿನಿಂದ ಉಡುಪಿ ಕಡೆಗೆ ಚಲಿಸುವ ಲಾರಿ ಹಿಂಬದಿಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!