Monday, May 6, 2024
spot_imgspot_img
spot_imgspot_img

ಉಪ್ಪಿನಂಗಡಿ: ಕಾರಿನಲ್ಲಿ ಮಾದಕ ದ್ರವ್ಯ ಎಂ.ಡಿ.ಎಂ.ಎ ಸಾಗಾಟ; ಆರೋಪಿಯ ಬಂಧನ

- Advertisement -G L Acharya panikkar
- Advertisement -
vtv vitla

ಉಪ್ಪಿನಂಗಡಿ: ಮಾರುತಿ ಕಾರಿನಲ್ಲಿ ನಿಷೇಧಿತ ಮಾದಕ ದ್ರವ್ಯ ಎಂ.ಡಿ.ಎಂ.ಎ ಯನ್ನು ಸಾಗಿಸುತ್ತಿದ್ದ ಆರೋಪಿಯನ್ನು ಕಾರ್ಯಚರಣೆ ನಡೆಸಿ ಪೊಲೀಸರು ಬಂಧಿಸಿದ ಘಟನೆ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದ ಬೊಳ್ಳಾರಿನಲ್ಲಿ ನಡೆದಿದೆ.

ಕಡಬ ಬೆಳಂದೂರು ಗ್ರಾಮದ ದೇವಸ್ಯ ನಿವಾಸಿ ಮೊಹಮ್ಮದ್‌ ನಿಝಾರ್‌(22) ಬಂಧಿತ ಆರೋಪಿ.

ಫೆ.7ರಂದು ಮಧ್ಯಾಹ್ನ ವೇಳೆ ಆರೋಪಿ ನಿಝಾರ್‌ ಮಾರುತಿ ಕಾರಿನಲ್ಲಿ ಮಾದಕ ದ್ರವ್ಯ ಎಂ.ಡಿ.ಎಂ.ಎ ಸಾಗಿಸುತ್ತಿದ್ದು, ಈ ವೇಳೆ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಗಳು ವಾಹನವನ್ನು ತಪಾಸಣೆ ಮಾಡಿದ್ದಾರೆ. ಕಾರಿನ ಡ್ಯಾಶ್‌ ಬೋರ್ಡ್‌‌ನಲ್ಲಿ 14.4 ಗ್ರಾಂ ತೂಕವಿರುವ ಎಂಡಿಎಂಎ ಪತ್ತೆಯಾಗಿದ್ದು, ಇದರ ಅಂದಾಜು ಬೆಲೆ ರೂ 35,000/- ಆಗಬಹುದು. ಖಾಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ನ 09 ಕವರ್ ಗಳು ಹಾಗೂ ಆರೋಪಿಯ ಐ-ಪೋನ್‌ ಕಂಪನಿಯ 1 ಮೊಬೈಲ್‌ ಸೆಟ್‌, ಅಂದಾಜು ಬೆಲೆ ರೂ: 20,000/- ಮತ್ತು HONOR ಕಂಪೆನಿಯ ಮೊಬೈಲ್ ಸೆಟ್ -1 ಇದರ ಅಂದಾಜು ಮೌಲ್ಯ ರೂ 5000/- ಆಗಬಹುದು.ಮಾರುತಿ ಸುಜುಕಿ ಕಂಪೆನಿಯ ಅಲ್ಟೋ 800 ಸಿಲ್ವರ್ ಬಣ್ಣದ ಕಾರು ಇದರ ಅಂದಾಜು ಮೌಲ್ಯ ರೂ: 2,00,000/- ಮತ್ತು ಆರೋಪಿಯ ಬಳಿ ರೂ.500 ಮುಖ ಬೆಲೆಯ 04 ನೋಟುಗಳು ಇದ್ದು, ಒಟ್ಟು 2000/- ರೂ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಉಪ್ಪಿ ನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!