Sunday, October 4, 2026
spot_imgspot_img
spot_imgspot_img

ಉಪ್ಪಿನಂಗಡಿ: ಅಪರಿಚಿತ ತಂಡದಿಂದ ಬಾಲಕನ ಅಪಹರಣಕ್ಕೆ ಯತ್ನ!

- Advertisement -
- Advertisement -

ಉಪ್ಪಿನಂಗಡಿ: ಓಮ್ನಿ ಕಾರಿನಲ್ಲಿ ಬಂದ ಅಪರಿಚಿತನೋರ್ವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿಯ ಮಠ ಹಿರ್ತಡ್ಕ ಎಂಬಲ್ಲಿ ಸೆ.28ರ ಮಂಗಳವಾರ ಸಂಜೆ ನಡೆದಿದೆ. ತಪ್ಪಿಸಿಕೊಂಡ ಬಾಲಕ ಹಿರ್ತಡ್ಕದ ಜನತಾ ಕಾಲನಿ ನಿವಾಸಿ ತಾಜ್‌ ಸಿಫಾನ್‌ (14) ಎನ್ನಲಾಗಿದೆ.

ತಾಜ್‌ ಸಿಫಾನ್‌ ಮಂಗಳವಾರ ಸಂಜೆ ಬೀಡಿ ಕೊಡಲೆಂದು ಹಿರ್ತಡ್ಕದಲ್ಲಿರುವ ಬೀಡಿ ಬ್ರಾಂಚ್‌‌‌ಗೆ ತೆರಳಿದ್ದು, ಈ ವೇಳೆ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಓಮ್ನಿ ಕಾರೊಂದು ಬಾಲಕ ಹಿಂಬಂದಿಯಿಂದ ಬಂದಿದ್ದು, ಅದರಲ್ಲಿದ್ದಾತ ಬಾಲಕನ ಅಂಗಿಯ ಕಾಲರ್‌ ಹಿಡಿದೆಳೆದಿದ್ದಾನೆ.

ಈ ಸಂದರ್ಭ ಬಾಲಕ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು, ಅಲ್ಲೇ ಸಮೀಪದಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದಾನೆ. ಆ ವೇಳೆ ಕಾರು ಕೂಡಾ ಅಲ್ಲಿಂದ ಪರಾರಿಯಾಗಿದೆ. ಘಟನೆಯ ಬಗ್ಗೆ ಬಾಲಕನ ತಂದೆ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಇದೇ ರೀತಿ ಇಲ್ಲಿನ ಲಕ್ಷ್ಮೀ ನಗರದಲ್ಲಿಯೂ ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತರು ಬಾಲಕನೋರ್ವನನ್ನು ಅಪಹರಿಸಲು ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!