Monday, April 29, 2024
spot_imgspot_img
spot_imgspot_img

ಉಪ್ಪಿನಂಗಡಿ: ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾದ ವೃದ್ಧನ ಬದುಕಿನ ನಿಜಾಂಶವೇನು ಗೊತ್ತಾ..? ಚೆನ್ನಾಗಿ ನೋಡಿಕೊಂಡರೂ ಮಗಳೊಂದಿಗೆ ನಿಲ್ಲದ ವೃದ್ದ; ವೃದ್ಧನ ಮಗಳಿಂದ ಸ್ಪಷ್ಟನೆ

- Advertisement -G L Acharya panikkar
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕರಾಯ ಮೂಲದ ಸುಮಾರು ೭೦ ವರ್ಷದ ವೃದ್ಧರೊಬ್ಬರು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಭಿಕ್ಷೆ ಬೇಡುವ ಶೋಚನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ನಾಲ್ಕು ಜನ ಮಕ್ಕಳಿದ್ದರೂ ವೈದ್ಧ ಬೀದಿಪಾಲು ಎಂಬುವುದಾಗಿ ಬೇರೆ ಮಾಧ್ಯಮಗಳು ಸೇರಿದಂತೆ vtv ವೆಬ್ಸೈಟ್ ನಲ್ಲಿ ಸುದ್ದಿ ಪ್ರಕಟವಾಗಿತ್ತು. ಈ ಬಗ್ಗೆ ವೃದ್ಧರ ಮಗಳು ಯಶೋಧ Vtv ಸಂಸ್ಥೆ ಗೆ ಪ್ರತಿಕ್ರಿಯಿಸಿ ಘಟನೆಯ ನೈಜ್ಯತೆಯನ್ನು ಸ್ಪಷ್ಟ ಪಡಿಸಿದ್ದಾರೆ.

ವೃದ್ಧ ಉಪ್ಪಿನಂಗಡಿ ಮೂಲದ ಕರಾಯ ನಿವಾಸಿಯಾಗಿದ್ದು, ಕೆಲ ವರ್ಷಗಳ ಹಿಂದೆ ತನ್ನ ಮಡದಿಯನ್ನು ಕಳಕೊಂಡ ಈ ವೃದ್ಧ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ತನ್ನ ಯೌವನದಲ್ಲಿ ಉಪ್ಪಿನಂಗಡಿಯಲ್ಲಿ ಜನಪ್ರಿಯ ಬಾಡಿಗೆ ಕಾರ್ ಡೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಈ ವೈದ್ಧ ಹಲವು ತಿಂಗಳವರೆಗೆ ಆಸ್ಟತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದರು. ಕುಡಿತದ ಚಟ ಹೊಂದಿದ್ದ ಈ ವೃದ್ದ ಮನೆಯವರಿಗೆ ತಿಳಿಸದೆ ತನ್ನ ಸಂಬಂಧಿಕರ ಮನೆಗೆ ಭೇಟಿ ನೀಡುತ್ತಾ ಇದ್ದರು. ಹೀಗಾಗಿ ಮನೆಯವರಿಗೂ ಸಂಬಂಧಿಕರಿಗೂ ಕಿರಿ ಕಿರಿ ಉಂಟುಮಾಡುತ್ತಿದ್ದ ಇವರನ್ನು ಸಂಬಂಧಿಕರ ಮನೆಗೆ ಹೋಗಬಾರದೆಂದು ಮನೆಯಿಂದ ಸೂಚನೆ ನೀಡಿದ್ದರು.

ಆದರೂ ಇದನ್ನು ಲೆಕ್ಕಿಸದ ವೃದ್ಧ ಸಕಲೇಶಪುರದ ತನ್ನ ಸಂಬಂಧಿಕರ ಮನೆಗೆ ಹೋಗಿ ಅಲ್ಲೇ ಇದ್ದು ಬಳಿಕ ಸುಮಾರು ದಿನಗಳ ನಂತರ ಮನೆಗೆ ಹಿಂತಿರುಗುತ್ತಾ ಇದ್ದರು.
ಹೀಗೆ ಕೆಲ ದಿನಗಳ ಹಿಂದೆ ವೃದ್ಧ ಸಕಲೇಶ ಪುರದಲ್ಲಿ ಅನ್ನ ಆಸರೆಯಿಲ್ಲದೆ ಪತ್ತೆಯಾಗಿದ್ದು ಇದನ್ನು ಕಂಡ ಖಾಸಗಿ ಹೊಟೇಲ್ ಮಾಲಕ ವೃದ್ದನನ್ನು ಉಪ್ಪಿನಂಗಡಿಯವರೆಂದು ಕಂಡು ಹಿಡಿದು ಬಳಿಕ ಸ್ವತಃ ತಮ್ಮ ಹಣದಲ್ಲಿ ಉಪ್ಪಿನಂಗಡಿ ಬಸ್ಸಿನಲ್ಲಿ ಕಳುಹಿಸಿಕೊಟ್ಟಿದ್ದಾರೆ. ಅದಲ್ಲದೆ ವೃದ್ಧನ ಮನೆಯವರನ್ನು ಸಂಪರ್ಕಿಸಿ ನಮ್ಮ ತಂದೆಯನ್ನು ಉಪ್ಪಿನಂಗಡಿ ಬಸ್ಸಿನಲ್ಲಿ ಕುಳ್ಳಿರಿಸಿ ಕಳುಹಿಸಿ ಕೊಡ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈ ವೃದ್ಧ ಸಕಲೇಶ ಪುರದಲ್ಲಿ ಮತ್ತೆ ಅರ್ಧ ದಾರಿಯಲ್ಲಿ ಬಸ್ಸಿನಿಂದ ಇಳಿದಿದ್ದು.. ಬಳಿಕ ಕೆಲ ದಿನಗಳ ನಂತರ ಮನೆ ಕಡೆ ಹಿಂತಿರುಗಿದ್ದಾರೆ.

ಈ ಘಟನೆ ನಡೆದ ಕೆಲ ದಿನಗಳ ಬಳಿಕ ವೃದ್ಧ ಮತ್ತೆ ಸಕಲೇಶಪುರದತ್ತ ತಮ್ಮ ಪ್ರಯಾಣ ಮುಂದುವರೆಸಿದ್ದು.. ಸಕಲೇಶ ಪುರದ ಖಾಸಗಿ ಬಸ್ಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದರು.

ಈ ದೃಶ್ಯವನ್ನು ಸಕಲೇಶಪುರದಲ್ಲಿನ ವೃದ್ಧನ ಸಂಬಂಧಿಕರೊಬ್ಬರು ನೋಡಿದ್ದು, ಈ ಬಗ್ಗೆ ವೃದ್ಧನ ಮಗಳು ಯಶೋಧ ಎಂಬವರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಮನೆಗೆ ಕರೆದುಕೊಂಡು ಹೋಗಲು ವೃದ್ಧನ ಸಂಬಂದಿಕರು ಎಷ್ಟೇ ಪ್ರಯತ್ನ ಪಟ್ಟರೂ ವೃದ್ಧ ಅವರ ಜೊತೆ ಹೋಗಲಿಲ್ಲ. ಹೀಗಾಗಿ ವೃದ್ಧ ಬೇರೆಕಡೆ ಹೋಗದಂತೆ ನೋಡೊಕೊಳ್ಳಿ ಎಂಬುವುದಾಗಿ ಸಂಬಂಧಿಕರಲ್ಲಿ ಯಶೋಧ ಕೇಳಿಕೊಂಡಿದ್ದಾರೆ. ಮರುದಿನ ಬೆಳಗ್ಗೆ ಯಶೋಧಾ ಅವರು ಉಪ್ಪಿನಂಗಡಿಯಿಂದ ಆ್ಯಂಬ್ಯುಲೆನ್ಸ್ ಜೊತೆಗೆ ಸಕಲೇಶಪುರಕ್ಕೆ ತೆರಳಿದ್ದಾರೆ. ಭಿಕ್ಷೆ ಬೇಡುತ್ತಿದ್ದ ತನ್ನ ತಂದೆಯನ್ನು ಆಂಬ್ಯುಲೆನ್ಸ್‌’ನಲ್ಲಿ ಉಪ್ಪಿನಂಗಡಿಗೆ ಕರೆತಂದು ತನ್ನ ಮನೆಯಲ್ಲಿ ಪೋಷಿಸುತ್ತಾ ಇದ್ದೇವೆ.

ನಾವು ನಾಲ್ಕು ಜನ ಮಕ್ಕಳಿದ್ದರೂ ನಾನು ಮತ್ತು ನನ್ನ ತಮ್ಮ ತಂದೆಯನ್ನು ನೋಡಿಕೊಳ್ತಾ ಇದ್ದೇವೆ. ನನ್ನ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟಕರವಾಗಿದ್ದರೂ ತನ್ನ ತಂದೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನಾವು ನೀಡುತ್ತಾ ಪೋಷಿಸುತ್ತಾ ಬಂದಿದ್ದೇವೆ. ಆದ್ರೆ ನನ್ನ ತಂದೆ ಅಪಘಾತಕ್ಕೊಳಗಾದ ಬಳಿಕ ಮಾನಸಿಕ ಸ್ಥಿತಿ-ಗತಿ ಸರಿಯಿಲ್ಲದ ಕಾರಣ ಅವರು ಅನೇಕ ಬಾರಿ ಮನೆಗೆ ತೆಳಿಸದೆ ಸಂಬಂಧಿಕರ ಮನೆಗೆ ಹೋಗಿ ತಂಗುತ್ತಿದ್ದರು ಕೆಲ ದಿನಗಳ ಬಳಿಕ ಹಿಂತಿರುಗುತ್ತಿದ್ದರು. ನಮ್ಮ ಮಾತನ್ನು ಲೆಕ್ಕಿಸದ ನಮ್ಮ ತಂದೆ ಅದೆಷ್ಟೋ ಬಾರಿ ದೂರದ ಜಾಗದಲ್ಲಿ ಬಾಕಿಯಾಗಿದ್ದರು. ಈ ಸಂದರ್ಭದಲ್ಲಿ ಸ್ವತಃ ನಾವೇ ಹುಡುಕಿ ಮನೆಗೆ ಕರೆ ತಂದಿದ್ದೇವೆ.

ನಾವು ಯಾರೂ ಹೇಳದರು ನಮ್ಮ ಮಾತನ್ನು ಕೇಳೊದಿಲ್ಲ, ಮನೆ ಬಿಟ್ಟು ಹೋದ ಕಾರಣ ತಂದೆಯ ಬಳಿ ಸಾರ್ವಜನಿಕರು ಪ್ರಶ್ನೆ ಕೇಳಿದ್ದಾರೆ. ಆಗ ಮಾನಸಿಕ ಖಿನ್ನರಾಗಿದ್ದ ಅವರು ವಿವೇಚನೆಯಿಲ್ಲದೆ ಬೇರೆ ಬೇರೆ ಉತ್ತರ ನೀಡುತ್ತಾರೆ. ಇದರಿಂದ ಸಾರ್ವಜನಿಕರು ತಂದೆ ಯನ್ನು ನೋಡಿಕೊಳ್ಳಲು ೪ ಮಕ್ಕಳಿಗೆ ಸಾಧ್ಯಯಿಲ್ಲವೇ ಎಂದು ಪ್ರಶ್ನಿಸುವುದು ಸಾಮಾನ್ಯ ಇದು ನಮಗೆ ಬೇಸರ ಉಂಟುಮಾಡಿದೆ. ನಾವು ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಆದರೆ ಅವರು ಮಾನಸಿಕ ಖಿನ್ನತೆಗೆ ಒಳಗಾಗಿ ಸ್ಪಷ್ಟವಾಗಿ ಮಾತನಾಡುವುದಿಲ್ಲ. ಎಂಬುವುದಾಗಿ ವೃದ್ಧನ ಮಗಳು ಯಶೋಧಾ ತಮ್ಮ ವೇದನೆಯನ್ನು ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!