Thursday, May 16, 2024
spot_imgspot_img
spot_imgspot_img

ವಿಟ್ಲ: ಚಂದಳಿಕೆ ಯುವ ಕೇಸರಿ ಅಬೀರಿ-ಅತಿಕಾರಬೈಲು ಇದರ ಆಶ್ರಯದಲ್ಲಿ 7ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ಚಂದಳಿಕೆ ಯುವ ಕೇಸರಿ ಅಬೀರಿ-ಅತಿಕಾರಬೈಲು ಇದರ ಆಶ್ರಯದಲ್ಲಿ 7ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ಭಾನುವಾರ ನಡೆಯಿತು.

ಉದ್ಯಮಿ ಅಶೋಕ್ ಕುಮಾರ್ ರೈ ಕೊಡಿಂಬಾಡಿ ಮಾತನಾಡಿ
ಸಂಘಟನೆಗಳು ಸಮಾಜಕ್ಕೆ ಬೆಳಕು ನೀಡುವ ಕಾರ್ಯ ಮಾಡಬೇಕು. ಯುವ ಕೇಸರಿ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿದೆ. ಸಂಘಟನೆಗಳು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೇ ಹೋರಾಟಕ್ಕೂ ಬದ್ಧರಾಗಬೇಕು.‌ ಸಂಘಟನೆಗಳ ಮೂಲಕ ಸರಕಾರದ ಸವಲತ್ತುಗಳು ಜನರಿಗೆ ಸಿಗುವಂತೆ ಮಾಡಬೇಕು ಎಂದರು.

vtv vitla
vtv vitla

ಯುವ ಕೇಸರಿ ಅಬೀರಿ-ಅತಿಕಾರಬೈಲ್ ಇದರ ಅಧ್ಯಕ್ಷ ಚಿದಾನಂದ ಶೆಟ್ಟಿ ಉಜಿರೆಮಾರ್ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಮತ್ತು ನಿವೃತ್ತ ಯೋಧ ದಾಸಪ್ಪ ಪೂಜಾರಿ ನೆಕ್ಕಿಲಾರು ಅವರನ್ನು ಸನ್ಮಾನಿಸಲಾಯಿತು.
ರಕ್ಷಿತಾ ಸನತ್ , ದುರ್ಗಾಪ್ರಸಾದ್ ಅತಿಕಾರಬೈಲು , ಹೃದಯ್ ಜೋಗಿ ಚಂದಳಿಕೆ ಅವರನ್ನು ಗೌರವಿಸಲಾಯಿತು.

ವಿಜಯಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ
ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಂಡಿತ್ತು.

ತುಳುನಾಡ ಸೂರ್ಯಚಂದ್ರೆರ್ ಕಿರುಚಿತ್ರದ ಪ್ರದರ್ಶನ ನಡೆಯಿತು. ಅನಾರೋಗ್ಯಪೀಡಿತರಿಗೆ ದತ್ತಿ ನಿಧಿಯನ್ನು ವಿತರಿಸಲಾಯಿತು.

ಈ ಸಂದರ್ಭ ಉದ್ಯಮಿ ಎಮ್ ಎನ್ ದಿನಕರ ಭಟ್ ಮಾವೆ, ಉದ್ಯಮಿ ದೇಜಪ್ಪ ಪೂಜಾರಿ ನಿಡ್ಯ, ವಿಟ್ಲ ಘಟಕದ ಯುವ ವಾಹಿನಿ ಅಧ್ಯಕ್ಷ ಯಶವಂತ ಪೂಜಾರಿ ಪರನೀರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ರಕ್ಷಿತಾ ಸನತ್ ಚಂದಳಿಕೆ, ಸದಸ್ಯ ಹರೀಶ್ ಪೂಜಾರಿ, ಚಂದಳಿಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪೂಜಾರಿ ಚಪುಡಿಯಡ್ಕ, ಯುವ ಕೇಸರಿ ಅಬೀರಿ-ಅತಿಕಾರಬೈಲ್ ಇದರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೆ ಕೇಪುಳಗುಡ್ಡೆ ಉಪಸ್ಥಿತರಿದ್ದರು.

ಸುಶಾಂತ್ ಸಾಲ್ಯಾನ್ ಸ್ವಾಗತಿಸಿದರು. ವಿಠಲ ಪೂಜಾರಿ ನಿರೂಪಿಸಿ, ದಿವಾಕರ ಶೆಟ್ಟಿ ವಂದಿಸಿದರು.

- Advertisement -

Related news

error: Content is protected !!