Saturday, April 20, 2024
spot_imgspot_img
spot_imgspot_img

ಉಳ್ಳಾಲ: ಚೆಕ್ ಬೌನ್ಸ್ ಪ್ರಕರಣ; ಅರೆಸ್ಟ್ ವಾರೆಂಟ್’ಗೆ ಹೆದರಿ ನಾಪತ್ತೆಯಾದ ಕೊಣಾಜೆ ಗ್ರಾ.ಪಂ ಅಧ್ಯಕ್ಷೆ…!!

- Advertisement -G L Acharya panikkar
- Advertisement -
vtv vitla
vtv vitla

ಉಳ್ಳಾಲ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಕೊಣಾಜೆ ಠಾಣಾ ಪೊಲೀಸರು ಅಧ್ಯಕ್ಷೆ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿ ಕೊಣಾಜೆ ಗ್ರಾಮಪಂಚಾಯತ್ ನ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆ ಚಂಚಲಾಕ್ಷಿ ಎಂದು ಗುರುತಿಸಲಾಗಿದೆ. ಆರೋಪಿತೆ ಚಂಚಲಾಕ್ಷಿ ಕೊಣಾಜೆ ಗ್ರಾಮದ ಪ್ರಥಮ ಪ್ರಜೆಯಾಗಿದ್ದು, ಆದರೆ ಇದೀಗ ಅಪರಾಧ ಪ್ರಕರಣದಲ್ಲಿ ಒಳಪಟ್ಟಿರುವುದರಿಂದ ಕೂಡಲೇ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಗರು ಒತ್ತಾಯಿಸಿದ್ದಾರೆ.

vtv vitla

ಘಟನೆಯ ವಿವರ:
ಚಂಚಲಾಕ್ಷಿ ಎಂಬುವವರು ಜ.1, 2019 ರಲ್ಲಿ ಮನೆಯಲ್ಲಿ ಕಷ್ಟ ಇದೆ, ಬ್ಯಾಂಕ್ ಸಾಲ ತೀರಿಸಲಾಗುತ್ತಿಲ್ಲ, ಮನೆ ಹರಾಜಿಗೆ ಬಂದಿದೆ, ಪತಿ ವಿದೇಶಕ್ಕೆ ಹೋಗುತ್ತಾರೆ. ಅದಕ್ಕಾಗಿ ಸಹಾಯ ಮಾಡಿ ಎಂದು ಹೇಳಿದ್ದರು. ಅದಕ್ಕೆ ಮಮತಾ ಶೈನಿ ಅವರು ಒಂದೇ ಪಕ್ಷದವಳು ಹಾಗೂ ಗೆಳತಿಯಾಗಿರುವುದರಿಂದ ಮೊದಲಿಗೆ ರೂ.2.5 ಲಕ್ಷ ನೀಡಿ ಬಳಿಕ ಮತ್ತೆ ರೂ. 50,000 ನೀಡಿದ್ದರು.

ಕರಾರುಪತ್ರದಲ್ಲಿ ಮೂರು ತಿಂಗಳೊಳಗೆ ಹಣವನ್ನು ವಾಪಸ್ಸು ನೀಡುವುದಾಗಿ ಒಪ್ಪಿಕೊಂಡಂತೆ ರೂ. 3 ಲಕ್ಷದ ಚೆಕ್ ನೀಡಿದ್ದು, ನಂತರ ಹಣ ನೀಡದೆ ಸತಾಯಿಸಿದ ಹಿನ್ನಲೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಕೇಸು ದಾಖಲಾಗಿತ್ತು. ಆ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ.

vtv vitla

ಅಲ್ಲಿ ಎರಡು ಬಾರಿ ವಿಚಾರಣೆಗೆ ಹಾಜರಾದರೂ ಆನಂತರ ನಡೆದ ಐದು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ. ಜ.7 ರಂದು ಬಂಧನದ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರು ಆರೋಪಿತೆಯನ್ನು ಹಿಡಿದಿರಲಿಲ್ಲ.

ಅದಕ್ಕಾಗಿ ಉಳ್ಳಾಲ ನಿವಾಸಿ ಮಮತಾ ಶೈನಿ ಡಿಸೋಜ ಅವರು ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದರು. ಬಳಿಕ ಕೊಣಾಜೆ ಪೊಲೀಸರ ಜೊತೆಗೆ ಶೈನಿಯವರು ಆಕೆಯ ಮನೆಗೆ, ಪಂಚಾಯಿತಿಗೆ ತೆರಳಿದ್ದರೂ ಆಕೆ ಪತ್ತೆಯಾಗಲಿಲ್ಲ. ಮನೆಗೆ ಬೀಗ ಹಾಕಲಾಗಿತ್ತು, ಮೊಬೈಲ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ. ಸದ್ಯ ಕೋಣಾಜೆ ಪೊಲೀಸರು ಆರೋಪಿ ಮಹಿಳೆಯ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.

- Advertisement -

Related news

error: Content is protected !!