Sunday, June 28, 2026
spot_imgspot_img
spot_imgspot_img

ಉಳ್ಳಾಲ: ದಡಕ್ಕೆ ಅಪ್ಪಳಿಸಿದ 10 ಮಂದಿಯಿದ್ದ ಮೀನುಗಾರಿಕಾ ಬೋಟ್

- Advertisement -
- Advertisement -

ಉಳ್ಳಾಲ: 10ಮಂದಿಯಿದ್ದ ಮೀನುಗಾರಿಕಾ ಬೋಟ್ ದಡಕ್ಕೆ ಅಪ್ಪಳಿಸಿರುವ ಘಟನೆ ಉಳ್ಳಾಲ ಕೋಡಿಯಲ್ಲಿ ನಡೆದಿದೆ.

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಎಂಬ ಹೆಸರಿನ್ ಬೋಟ್ ಇಂದು ನಸುಕಿನ ಜಾವ ಮಂಗಳೂರಿನ ಉಳ್ಳಾಲದ ಕೋಡಿಯಲ್ಲಿ ದಡಕ್ಕೆ ಅಪ್ಪಳಿಸಿದೆ. ನಸುಕಿನ ಜಾವ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದಾಗ ದುರ್ಘಟನೆ ಸಂಭವಿಸಿದೆ.

ಬೋಟ್ ನಲ್ಲಿದ್ದ 10 ಮೀನುಗಾರರನ್ನು ಸ್ಥಳೀಯರು ರಕ್ಷಸಿದ್ದಾರೆ. ಬೋಟ್ ನಲ್ಲಿ ಕನ್ಯಾಕುಮಾರಿ ಮೂಲದ ಐದು ಮಂದಿ ಮೀನುಗಾರರು ಮದ್ಯ ಸೇವಿಸಿದ್ದರು. ಬೋಟ್ ದಡಕ್ಕೆ ಅಪ್ಪಳಿಸಿದಾಗ ಮೀನುಗಾರರು ವಾಂತಿ ಮಾಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೋಟ್ ಅಪ್ಪಳಿಸಲು ನಿಖರವಾದ ಕಾರಣದ ಬಗ್ಗೆ ತಿಳಿದು ಬಂದಿಲ್ಲ. ಬೋಟ್ ಚಾಲಕ ಇನ್ನೋರ್ವನ ಕೈಗೆ ಬೋಟ್ ನ ನಿಯಂತ್ರಣ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

driving
- Advertisement -

Related news

error: Content is protected !!