Sunday, May 5, 2024
spot_imgspot_img
spot_imgspot_img

ಉಳ್ಳಾಲ: ನಳಿನ್ ಕಟೀಲ್ ಓರ್ವ ವಿದೂಷಕ – ಯಕ್ಷಗಾನದಲ್ಲಿ ಕೋಮುವಾದವನ್ನು ಬಿತ್ತುವಾತ : ದ.ಕ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ, ಕೋಮುವಾದ ಇಲ್ಲಿಂದಲೇ ಆರಂಭ – ಸಿದ್ದರಾಮಯ್ಯ

- Advertisement -G L Acharya panikkar
- Advertisement -

ಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಜಾತಿ ವ್ಯವಸ್ಥೆಯನ್ನು ನಿರ್ಮಿಸಿ ಒಂದು ಜಾತಿಯವರನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟಲು ಸಾಧ್ಯ. ಆರ್ಥಿಕತೆ, ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆ. ನಳಿನ್ ಕಟೀಲ್ ಓರ್ವ ವಿದೂಷಕನಾಗಿರುವಾತ, ಯಕ್ಷಗಾನದಲ್ಲಿ ಎಲ್ಲಾ ಬಿಜೆಪಿ ವಿಚಾರಗಳನ್ನು ಪ್ರಚಾರಪಡಿಸಲು ಹೇಳುತ್ತಾನೆ. ಆರಾಧಿಸುವ ಕಲೆ ಯಕ್ಷಗಾನದಲ್ಲಿ ಕೋಮುವಾದವನ್ನು ಬಿತ್ತುವಾತ. ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ, ಕೋಮುವಾದ ಇಲ್ಲಿಂದಲೇ ಆರಂಭವಾಗಿದೆ. ಕೋಮುವಾದದ ಬೀಜ ಇಲ್ಲಿನ ಲ್ಯಾಬ್ ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.

ಹರೇಕಳ ಕಡವಿನಬಳಿಯ ನಡೆದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯಲ್ಲಿ ಬಿಜೆಪಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

ಬಿಜೆಪಿಯವರು ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸಕ್ಕೆ ಮುಂದಾಗುತ್ತಾರೆ. ಬಹುತ್ವದ ದೇಶ ಎಲ್ಲರೂ ಒಗ್ಗಟ್ಟಿನಲ್ಲಿರುವ ದೇಶ. ಈಗಿನ ಡಬಲ್ ಇಂಜಿನ್ ಸರಕಾರ ಎಲ್ಲವನ್ನೂ ಮುರಿದುಹಾಕಿದೆ. ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಂ. 1 ಆಗಲಿದೆ. ಎಲ್ಲರಿಗೂ ರಕ್ಷಣೆ ಸಿಗಬೇಕು, ಸಂವಿಧಾನದಲ್ಲಿ ಎಲ್ಲರೂ ಸಮಾನ ಎಂದು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ಯಾರು ಯಾವ ಧರ್ಮವನ್ನೂ ಅನುಸರಿಸಬಹುದು ಎಂದು ಹೇಳಲಾಗಿದೆ. ಆದರೆ ಸಮಾನ ಅವಕಾಶ, ಸಮಾನ ಹಕ್ಕು ಎಲ್ಲವನ್ನೂ ನಶಿಸಿಹಾಕಲಾಗುತ್ತಿದೆ.

ಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಜಾತಿ ವ್ಯವಸ್ಥೆಯನ್ನು ನಿರ್ಮಿಸಿ ಒಂದು ಜಾತಿಯವರನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟಲು ಸಾಧ್ಯ. ಆರ್ಥಿಕತೆ, ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆ. ಸಂವಿಧಾನ ಬದಲಾವಣೆ ಮಾಡಲು ಹೇಳಿದಂತ ಅನಂತ್ ಕುಮಾರ್ ಹೆಗ್ಡೆ ಗ್ರಾ.ಪಂ ಸದಸ್ಯನಾಗಲೂ ನಾಲಾಯಕ್, ಮೋದಿ, ಷಾ ಅಂತಹವರನ್ನು ಬೆಂಬಲಿಸಿ ಸಂವಿಧಾನ ವಿರೋಧಿಗಳು ಎಂದು ತೋರಿಸಿಕೊಟ್ಟಿದ್ದಾರೆ‌. ಪರೇಶ್ ಮೇಸ್ತಾ ಸಾವನ್ನು ಕಾಂಗ್ರೆಸ್ ನವರು ಕೊಲೆ ಮಾಡಿದ್ದಾರೆ ಅಂದರು.

ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಬಿಐಗೆ ವಹಿಸಿದ್ದೆ. ಕೊಲೆಯಲ್ಲ ಇದೊಂದು ಆಕಸ್ಮಿಕ ಸಾವು ಎಂದು ವರದಿ ನೀಡಿತು. ಇಂತಹ ಅನೇಕ ಕೊಲೆಗಳನ್ನು ಬೇರೆಯವರ ಮೇಲೆ ಎತ್ತಿಕಟ್ಟುವ ಕೆಲಸ ದ.ಕ ಜಿಲ್ಲೆಯಲ್ಲಿ ಆಗಿದೆ. ಈಗಿನ ಮುಖ್ಯಮಂತ್ರಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿ, ಆರ್ ಎಸ್ ಎಸ್ ಮುಖ್ಯಮಂತ್ರಿಯಲ್ಲ. ಅಲ್ಪಸಂಖ್ಯಾತರ ಕೊಲೆಯಾದ ಮನೆಗೇ ಹೋಗುವುದಿಲ್ಲ. ಸರಕಾರದ ಖಜಾನೆ ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ. ಆರ್ ಎಸ್ ಎಸ್ ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಇರದ ಆರ್ ಎಸ್ ಎಸ್ ನವರು ರಾಷ್ಟ್ರಭಕ್ತಿ ಬಗ್ಗೆ ಮಾತನಾಡಲು ನೈತಿಕತೆಯ ಇಲ್ಲದವರು.

ನಳಿನ್ ಕಟೀಲ್ ಓರ್ವ ವಿದೂಷಕನಾಗಿರುವಾತ, ಯಕ್ಷಗಾನದಲ್ಲಿ ಎಲ್ಲಾ ಬಿಜೆಪಿ ವಿಚಾರಗಳನ್ನು ಪ್ರಚಾರಪಡಿಸಲು ಹೇಳುತ್ತಾನೆ. ಆರಾಧಿಸುವ ಕಲೆ ಯಕ್ಷಗಾನದಲ್ಲಿ ಕೋಮುವಾದವನ್ನು ಬಿತ್ತುವಾತ. ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಕಳ್ಳಸಾಗಾಣಿಕೆಯಲ್ಲೂ ಅಡಿಕೆ ಬರುತ್ತಿದೆ. ಅಡಿಕೆಯನ್ನು ನಾಶಗೊಳಿಸಲು ಹೊರಟಿದ್ದಾರೆ. ಒಂದು ವರ್ಷ ಐದು ತಿಂಗಳಾದರೂ ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ಕೆಂಪಯ್ಯ ಬರೆದಿದ್ದರೂ ಈವರೆಗೆ ಸರಕಾರ ತನಿಖೆ ನಡೆಸಿಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ,40% ಕಮೀಷನ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಬಿಲ್ ಕೊಡದೇ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳಿದರು.

- Advertisement -

Related news

error: Content is protected !!