Sunday, May 19, 2024
spot_imgspot_img
spot_imgspot_img

ಶೂಟಿಂಗ್ ಸೆಟ್​ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ; ಶಿಜಾನ್‌ ಖಾನ್‌ ಅರೆಸ್ಟ್‌.!

- Advertisement -G L Acharya panikkar
- Advertisement -

ಮುಂಬೈ: ಇತ್ತೀಚಿನ ದಿನಗಳಲ್ಲಿ ಅಪಘಾತ, ಹೃದಯಾಘಾತ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು, ಈ ಮೂರು ಕಾರಣಗಳಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ನಟಿಯೊಬ್ಬಳು ತನ್ನ ಶೂಟಿಂಗ್ ಸೆಟ್​ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಾಲಿವ್ ಎಂಬಲ್ಲಿನ ಶೂಟಿಂಗ್​ ಸೆಟ್​​ನಲ್ಲಿ ಈ ಪ್ರಕರಣ ನಡೆದಿದೆ. ಕಿರುತೆರೆ ನಟಿ ತುನಿಷಾ ಶರ್ಮಾ (20) ಆತ್ಮಹತ್ಯೆ ಮಾಡಿಕೊಂಡಾಕೆ. ಈಕೆ ತಾನು ನಟಿಸುತ್ತಿದ್ದ ಕಿರುತೆರೆಯ ಶೂಟಿಂಗ್ ಸೆಟ್​​ನಲ್ಲೇ ನೇಣು ಹಾಕಿಕೊಂಡಿದ್ದಳು. ಸ್ಥಳದಲ್ಲಿದ್ದವರು ಕೂಡಲೇ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದರು, ಅದಾಗಲೇ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಘಟನೆಯಿಂದ ಸೆಟ್​ನಲ್ಲಿದ್ದವರು ತೀವ್ರ ಆಘಾತಕ್ಕೆ ಒಳಗಾಗಿದ್ದು, ನಟಿಯ ಶವವನ್ನು ನೋಡಿ ಬೆಚ್ಚಿಬಿದ್ದಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಎಂಬಿತ್ಯಾದಿ ಸಂಗತಿಗಳು ಇನ್ನಷ್ಟೇ ಖಚಿತವಾಗಿ ತಿಳಿಯಬೇಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.

ಚಕ್ರವರ್ತಿನ್ ಅಶೋಕ್ ಸಾಮ್ರಾಟ್, ಗಬ್ಬರ್ ಪೂಂಚ್​ವಾಲಾ, ಶೇರ್ ಇ ಪಂಜಾಬ್​ ಮುಂತಾದ ಧಾರಾವಾಹಿಗಳಲ್ಲಿ ಈಕೆ ನಟಿಸಿದ್ದಳು. ಫಿತೂರ್, ಬಾರ್ ಬಾರ್ ದೇಖೋ, ಕಹಾನಿ 2: ದುರ್ಗಾ ರಾಣಿ ಸಿಂಗ್, ದಬಾಂಗ್​ 3 ಮುಂತಾದ ಸಿನಿಮಾಗಳಲ್ಲೂ ಈಕೆ ಅಭಿನಯಿಸಿದ್ದಳು.

ಸಹನಟ ಶಿಜಾನ್‌ ಖಾನ್‌ ಅರೆಸ್ಟ್‌.!
ಹಿಂದಿ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಹನಟ ಶಿಜಾನ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತುನಿಷಾ ಅವರ ತಾಯಿ ದೂರು ನೀಡಿದ್ದರು. ದೂರಿನ ಅನ್ವಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶಿಜಾನ್‌ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಶಿಜಾನ್‌ ಖಾನ್‌ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಎಸಿಪಿ ಚಂದ್ರಕಾಂತ ಜಾಧವ್ ತಿಳಿಸಿದ್ದಾರೆ.

ಪ್ರಕರಣದ ಸುತ್ತ ಅನುಮಾನದ ಹುತ್ತ..! ಪ್ರೇಮ ಸಂಬಂಧವೇ ಮುಳುವಾಯಿತೇ?
ಇನ್ನು ಕೆಲವೊಂದು ಆಂಗ್ಲ ವೆಬ್‌ಸೈಟ್‌ಗಳು ಪ್ರೇಮ ವೈಫಲ್ಯವೇ ಕಾರಣ ಎಂಬುವುದಾಗಿ ವರದಿ ಮಾಡಿದೆ. ತುನಿಷಾ ಶರ್ಮಾ ಮತ್ತು ಸಹನಟ ಶಿಜಾನ್‌ ಖಾನ್‌ ಈ ಹಿಂದೆ ಆತ್ಮೀಯ ಸಂಬಂಧ ಹೊಂದಿದ್ದರು. ಪ್ರೇಮ ಸಂಬಂಧ ಹೊಂದಿದ್ದ ಈ ಜೋಡಿ ನಂತರ ಬ್ರೇಕ್ ಮಾಡಿಕೊಂಡಿದ್ದರು. ಇದುವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ ಎಂದು ವರದಿ ಮಾಡಿದೆ.

- Advertisement -

Related news

error: Content is protected !!