Sunday, June 14, 2026
spot_imgspot_img
spot_imgspot_img

ಉಳ್ಳಾಲ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು

- Advertisement -
- Advertisement -
vtv vitla
vtv vitla

ಉಳ್ಳಾಲ: ಅಪಘಾತ ಪ್ರಕರಣದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಕುಂಪಲ ಆಶ್ರಯ ಕಾಲನಿ ನಿವಾಸಿ ವಿಜೇಶ್ (31)ಯಾನೆ ವಿಜಿ ಮೃತಪಟ್ಟ ಯುವಕ.

ವಿಜೇಶ್ ಡಿ.2 ರಂದು ಕೊಲ್ಯ ಹೆದ್ದಾರಿಯಲ್ಲಿ ಬೈಕಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಯುವತಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ವಿಜೇಶ್ ಮತ್ತು ಪಾದಚಾರಿ ಕೊಲ್ಯ ದ್ವಾರಕಾ ನಗರ ನಿವಾಸಿ ಪಲ್ಲವಿ ಇಬ್ಬರೂ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ ವಿಜೇಶ್ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಇನ್ನು ಪಲ್ಲವಿ ಸ್ಥಿತಿಯೂ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

vtv vitla
vtv vitla
- Advertisement -

Related news

error: Content is protected !!