Friday, April 26, 2024
spot_imgspot_img
spot_imgspot_img

ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗಳಿಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಶಿಕ್ಷಣ

- Advertisement -G L Acharya panikkar
- Advertisement -

ಪುತ್ತೂರು: 2021-22 ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮತ್ತು ಪ್ರಾಂಶುಪಾಲ ಮಹೇಶ ನಿಟಿಲಾಪುರ ವಿದ್ಯಾರ್ಥಿಗಳಿಗೆ ಶಾಲು ಹೊದಿಸಿ ಅಭಿನಂದಿಸಿದರು.

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅಭಯ್ ಶರ್ಮಾ(625 ಅಂಕ), ಆತ್ಮೀಯಾ ಎಂ. ಕಶ್ಯಪ್(625 ಅಂಕ), ಅಭಿಜ್ಞಾ ಆರ್(625 ಅಂಕ), ಅದಿತಿ ಕೆ(624 ಅಂಕ),ವೃದ್ಧಿ ಕೆ(624 ಅಂಕ), ಮೇಘಾ ನಾಯಕ್( 624 ಅಂಕ), ಅಶ್ವಿನಿ ಪ್ರಭು ಬಿ (620 ಅಂಕ), ತನುಷ್ (617 ಅಂಕ), ವಿಟ್ಲ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಧನ್ಯಶ್ರೀ(625 ಅಂಕ) ಮತ್ತು ಚಿಂತನಾ ಬಿ. ಎನ್(621 ಅಂಕ), ಪಾಣೆಮಂಗಳೂರಿನ ಎಸ್.ಎಲ್ ಎನ್.ಪಿ ಪ್ರೌಢ ಶಾಲೆಯ ಅಕ್ಷತಾ ನಾಯಕ್(623 ಅಂಕ) ಮತ್ತು ಶ್ರೀರಾಮ್(623 ಅಂಕ), ರಾಮಕೃಷ್ಣ ಪ್ರೌಢ ಶಾಲೆಯ ಸೌಮ್ಯ(623 ಅಂಕ), ಉಪ್ಪಿನಂಗಡಿ ಇಂದ್ರಪ್ರಸ್ಥ ಪ್ರೌಢ ಶಾಲೆಯ ಸಾಕ್ಷಿತ್ ಎಸ್ ರೈ(622 ಅಂಕ),ಪಟ್ಟೆಯ ಪ್ರತಿಭಾ ಪ್ರೌಢ ಶಾಲೆಯ ಹಸ್ತಿಕ್ (621 ಅಂಕ), ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಅನುಷಾ ರೈ(620 ಅಂಕ), ರಿಕಿಷಾ ಶೆಟ್ಟಿ (616 ಅಂಕ)ಮತ್ತು ಅನಾಘ ಎಚ್ ಅಡಿಗ(617 ಅಂಕ), ಸೈಂಟ್ ಜಾರ್ಜ್ ಪ್ರೌಢ ಶಾಲೆಯ ಲಕ್ಷ್ಮೀಶ, ಸುಳ್ಯದ ಸ್ನೇಹಾ ಪ್ರೌಢ ಶಾಲೆಯ ಸೃಜನ್ ಕೆ, ಸಜಿಪಮೂಡ ಸರಕಾರಿ ಪ್ರೌಢ ಶಾಲೆಯ ತನುಶ್ರೀ(614 ಅಂಕ), ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮಿಥನ್ ವಿ ಕೆ(615 ಅಂಕ), ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ರಮಾ ಭಾರತಿ(617 ಅಂಕ) ಸಾಧನೆಯ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.

ವಿವಿಧ ಪ್ರೌಢಶಾಲೆಯಲ್ಲಿ ಉತ್ತಮ ಅಂಕಗಳಿಸಿ ಟಾಪರ್ ಗಳಾಗಿ ಹೊರಹೊಮ್ಮಿ ಮುಂದಿನ ದಿನಗಳಲ್ಲಿನ ಅಧ್ಯಯನಕ್ಕಾಗಿ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡದ್ದರಿಂದ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ಅಪಾರ ಗೌರವ ಮತ್ತು ಹೆಮ್ಮೆ ತಂದಿದೆ. ಇಂತಹ ಸಂಭ್ರಮವನ್ನು ಮುಂದಿನ ದಿನಗಳಲ್ಲೂ ಎಲ್ಲರೂ ಅನುಭವಿಸುವಂತಾಗಬೇಕು. ವಿವೇಕಾನಂದ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ.

vtv vitla
vtv vitla

ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸಲಾಗುತ್ತದೆ. ಹಾಗೆಯೇ ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ 98% ಮತ್ತು ಅದಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. 97% ರಿಂದ 98% ಅಂಕ ಪಡೆದವರಿಗೆ ಕಾಲೇಜು ಶುಲ್ಕದಲ್ಲಿ ಹತ್ತು ಸಾವಿರ ವಿನಾಯಿತಿ ದೊರಕಲಿದೆ. 95% ರಿಂದ 97% ಅಂಕ ಪಡೆದವರಿಗೆ ಕಾಲೇಜು ಶುಲ್ಕದಲ್ಲಿ ಆರು ಸಾವಿರದಷ್ಟು ವಿನಾಯಿತಿ ದೊರಕಲಿದೆ ಎಂದು ಪ್ರಾಂಶುಪಾಲ ಮಹೇಶ ನಿಟಿಲಾಪುರ ಹೇಳಿದ್ದಾರೆ.

- Advertisement -

Related news

error: Content is protected !!