Tuesday, April 30, 2024
spot_imgspot_img
spot_imgspot_img

ಏಕಕಾಲಕ್ಕೆ 40 ರೋಗಿಗಳಿಗೆ ಜಾನುವಾರು ಚುಚ್ಚುಮದ್ದು ನೀಡಿದ ನಕಲಿ ವೈದ್ಯ

- Advertisement -G L Acharya panikkar
- Advertisement -

ನಕಲಿ ವೈದ್ಯನೊಬ್ಬ 40 ರೋಗಿಗಳ ಜೀವದ ಜೊತೆ ಆಡವಾಡಿದ್ದಾನೆ. ಏಕಕಾಲಕ್ಕೆ 40 ರೋಗಿಗಳಿಗೆ ಜಾನುವಾರು ಚುಚ್ಚುಮದ್ದು ನೀಡಿದ್ದಾನೆ.

ಮಹಾರಾಷ್ಟ್ರದ ಅಹಮದ್‌ನಗರದ ಪಥರ್ಡಿ ತಾಲೂಕಿನ ಖಂಡೋಬಾವಾಡಿಯಲ್ಲಿ ನಡೆದ ಇಂತಹದ್ದೊಂದು ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೈದ್ಯನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಪ್ರಾಣಿಗಳಿಗೆ ನೀಡಿದ ಚುಚ್ಚುಮದ್ದನ್ನ ಮನುಷ್ಯರಿಗೆ ನೀಡಿದ್ದಾನೆ. ಈ ಬೋಗಸ್ ವೈದ್ಯ ಸುಮಾರು 40ಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರಿಗೆ ಚುಚ್ಚುಮದ್ದು ನೀಡಿರುವುದು ಗೊತ್ತಾಗಿದೆ.

ರಾಜೇಂದ್ರ ಜವಾಂಜಲೆ ಎಂಬ ನಕಲಿ ವೈದ್ಯ ಕಳೆದೆರಡು ದಿನಗಳ ಹಿಂದೆ ಕಾರಂಜಿ ಬಳಿಯ ಖಂಡೋಬಾವಾಡಿಗೆ ರಾಜೇಂದ್ರ ವೈದ್ಯನಾಗಿ ಬಂದಿದ್ದಾನೆ. ಅಲ್ಲಿ ಕೆಲವರಿಗೆ ಕುತ್ತಿಗೆ, ಮಂಡಿ, ಬೆನ್ನು ನೋವಿಗೆ ಚುಚ್ಚುಮದ್ದು ನೀಡಿದ್ದಾನೆ. ನೋವು ಇದ್ದ ಕಡೆ ಇಂಜೆಕ್ಷನ್ ಕೊಟ್ಟು ಒಬ್ಬೊಬ್ಬರಿಂದ ಐನೂರು ರೂಪಾಯಿ ವಸೂಲಿ ಮಾಡಿದ್ದಾನೆ. ಆದ್ರೆ, ಗ್ರಾಮದ ಕೆಲ ಯುವಕರಿಗೆ ಈ ನಕಲಿ ವೈದ್ಯರ ಮೇಲೆ ಅನುಮಾನ ಬಂದಿತ್ತು. ವೈದ್ಯರು ಬ್ಯಾಗ್‌ನಲ್ಲಿದ್ದ ಇಂಜೆಕ್ಷನ್ ಬಾಟಲಿಗಳನ್ನ ಪರಿಶೀಲಿಸಿದಾಗ ಆ ಬಾಟಲಿಗಳ ಮೇಲೆ ಪ್ರಾಣಿಗಳ ಗುರುತುಗಳು ಕಂಡುಬಂದಿವೆ.

ತಕ್ಷಣ ಆತನನ್ನ ಹಿಡಿದು ತಿಸಗಾಂವ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಬಾಬಾಸಾಹೇಬ್ ಹೊಡಶಿಯಲ್ ಅವರಿಗೆ ಒಪ್ಪಿಸಿದ್ದಾರೆ. ಬಳಿಕ ಈ ನಕಲಿ ವೈದ್ಯನ ವಿರುದ್ಧ ಪಾತರ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಈ ಬೋಗಸ್ ವೈದ್ಯರ ಬ್ಯಾಗ್‌ನಲ್ಲಿದ್ದ ಔಷಧಗಳನ್ನ ವಶಪಡಿಸಿಕೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದ ಈ ಬೋಗಸ್ ವೈದ್ಯ ಗ್ರಾಮದ ಜನರಿಗೆ ಚುಚ್ಚುಮದ್ದು ನೀಡುತ್ತಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಘಟನೆ ಕುರಿತು ರಾಜ್ಯ ಆರೋಗ್ಯ ಇಲಾಖೆ ಪ್ರತಿಕ್ರಿಯೆ ನೀಡಿದೆ. ಬೋಗಸ್ ವೈದ್ಯರಿಂದ ಚಿಕಿತ್ಸೆ ಪಡೆದವರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಸಮಸ್ಯೆ ಇದ್ದಲ್ಲಿ ಕೂಡಲೇ ಆರೋಗ್ಯ ಇಲಾಖೆಯನ್ನ ಸಂಪರ್ಕಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ರೀತಿ ಬೋಗಸ್ ವೈದ್ಯರು ಕಂಡು ಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.

- Advertisement -

Related news

error: Content is protected !!