Friday, April 26, 2024
spot_imgspot_img
spot_imgspot_img

ರಸ್ತೆ ಬದಿಯಲ್ಲಿಯೇ ಪತ್ನಿಗೆ ಚೂರಿ ಇರಿದು ಕೊಲೆ- ಆಕೆಯ ಶವದ ಮೇಲೂ 25 ಬಾರಿ ಇರಿದ ಪಾಪಿ ಪತಿ!

- Advertisement -G L Acharya panikkar
- Advertisement -

ನವದೆಹಲಿ: ಹಾಡ ಹಗಲೇ ಪತ್ನಿಯ ಜೊತೆಗೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಕೆಯನ್ನು ಚೂರಿಯಿಂದ ಇರಿದು ಕೊಂದು, ಶವದ ಮೇಲೂ 25 ಬಾರಿ ಇರಿದ ಘಟನೆ ನವದೆಹಲಿಯ ರೋಹಿಣಿ ನಗರದಲ್ಲಿ ನಡೆದಿದೆ.

ಹಾಡಹಗಲೇ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೃತ ಯುವತಿಯನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ನೀಲು ಮೆಹ್ತಾ ಎಂದು ಗುರುತಿಸಲಾಗಿದೆ. ಆರೋಪಿ, ನೀಲುವಿನ ಪತಿಯನ್ನು ಹರೀಶ್ ಮೆಹ್ತಾ ಎಂದು ಪೊಲೀಸರು ತಿಳಿಸಿದ್ದಾರೆ.

ಮ್ಯಾರೇಜ್ ಬ್ಯೂರೋದಲ್ಲಿ ಉದ್ಯೋಗಿಯಾಗಿದ್ದ ಹರೀಶ್ ಮೆಹ್ತಾ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಇಬ್ಬರೂ ಗುಜರಾತಿನ ರಾಜಕೋಟ್ ನಿವಾಸಿಗಳಾಗಿದ್ದು, ದೆಹಲಿಯ ಬುದ್ಧ್ ವಿಹಾರ್ ಫೇಸ್ ಒಂದರಲ್ಲಿ ಬಾಡಿಗೆ ಮನೆಯಲ್ಲಿದ್ದರು.

ಪತ್ನಿಯ ಶೀಲದ ಬಗ್ಗೆ ಶಂಕೆ ಹೊಂದಿದ್ದ ಹರೀಶ್ ಮೆಹ್ತಾ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ

- Advertisement -

Related news

error: Content is protected !!