Friday, March 29, 2024
spot_imgspot_img
spot_imgspot_img

ಐಸ್ ಕ್ರೀಂನಲ್ಲಿ ಇಲಿಯ ವಿಷ ಬೆರೆಸಿ ತನ್ನ ಮೂವರು ಮಕ್ಕಳಿಗೆ ನೀಡಿದ ಪಾಪಿ ತಂದೆ; 5 ವರ್ಷದ ಮಗು ಸಾವು, ಇನ್ನಿಬ್ಬರು ಗಂಭೀರ

- Advertisement -G L Acharya panikkar
- Advertisement -

ಮುಂಬೈ: ತಂದೆಯೇ ಐಸ್ ಕ್ರೀಮ್ ನಲ್ಲಿ ಇಲಿಯ ವಿಷ ಬೆರೆಸಿ ತನ್ನ ಮಕ್ಕಳಿಗೆ ನೀಡಿದ ಘಟನೆ ಮುಂಬೈಯಲ್ಲಿ ನಡೆದಿದ್ದು, ಪರಿಣಾಮವಾಗಿ ಐದು ವರ್ಷದ ಮಗು ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.

ಐದು ವರ್ಷ ವಯಸ್ಸಿನ ಅಲಿಶಾನ್ ಅಲಿ ಮೊಹಮ್ಮದ್ ಮೃತಪಟ್ಟ ಮಗುವಾಗಿದ್ದು, 2 ವರ್ಷ ವಯಸ್ಸಿನ ಅರ್ಮಾನಾ ಹಾಗೂ 7 ವರ್ಷ ವಯಸ್ಸಿನ ಅಲೀನಾ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಮನೆಯಲ್ಲಿ ಜಗಳ ನಡೆದ ಬಳಿಕ ಪತಿ ನೌಶಾದ್ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿರುವುದಾಗಿ ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ. ಕೌಟುಂಬಿಕ ಕಲಹದ ಬಳಿಕ ಕೋಪಗೊಂಡ ಪತಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಮುಂಬೈನ ಮನ್ ಕುರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆರೋಪಿ ತಂದೆ ಮೊಹಮ್ಮದ್ ಅಲಿ ನೌಶಾದ್ ನ ವಿರುದ್ಧ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!