Wednesday, April 24, 2024
spot_imgspot_img
spot_imgspot_img

ಕಡಬ: ಕೊಂಬಾರು ಎಸ್ಟೇಟ್ ನಲ್ಲಿ ಕಾಡು ಪ್ರಾಣಿಗಳ ಹತ್ಯೆ; ಪೋಲಿಸರಿಂದ ದಾಳಿ, ಎಸ್ಟೇಟ್ ಮಾಲಕ ಪೋಲಿಸ್ ವಶಕ್ಕೆ..!

- Advertisement -G L Acharya panikkar
- Advertisement -

ಕಡಬ: ಕೊಂಬಾರಿನಲ್ಲಿರುವ ಎಸ್ಟೇಟ್ ನಲ್ಲಿ ಅಕ್ರಮ ಕಾಡು ಪ್ರಾಣಿಗಳ ಹತ್ಯೆ ಮತ್ತು ಜಾನುವಾರು ಹತ್ಯೆಯಾಗುತ್ತಿದೆ ಎಂಬ ಮಾಹಿತಿಯ ಮಧ್ಯೆಯೇ ಫೆ.7ರಂದು ಎಸ್ಟೇಟ್ ಒಳಗಿನಿಂದ ನಾಯಿಗಳು ಪ್ರಾಣಿಗಳ ಮೂಳೆಯನ್ನು ಕಚ್ಚಿಕೊಂಡು ಹೊರಗೆ ತಂದಿದ್ದು, ಇದನ್ನು ಗಮನಿಸಿದ ಊರವರು ಪೋಲಿಸರಿಗೆ ಮಾಹಿತಿ ನೀಡಿದ್ದರು. ಮಾಹಿತಿಯ ಮೇರೆಗೆ ಕಡಬ ಠಾಣಾ ಎಸ್.ಐ. ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಎಸ್ಟೇಟ್ ಮಾಲಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

vtv vitla
vtv vitla

ಈ ಎಸ್ಟೇಟ್ ಒಳಗಡೆ ನಿರಂತರ ಕಾಡು ಪ್ರಾಣಿಗಳ ಹತ್ಯೆ ಮಾಡಲಾಗುತ್ತಿದೆ, ಅಲ್ಲದೆ ಜಾನುವಾರು ಹತ್ಯೆ ಮಾಡುತ್ತಿರುವ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಕೇಳಿ ಬರುತ್ತಿತ್ತು, ಇದಕ್ಕೆ ಪೂರಕ ಎಂಬಂತೆ ಇಂದು ನಾಯಿಯೊಂದು ಪ್ರಾಣಿಗಳ ಅಸ್ಥಿಪಂಜರವನ್ನು ಎಸ್ಟೇಟ್ ಹೊರಗೆ ತಂದಿತ್ತು, ಇದನ್ನು ಗಮನಿಸಿದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

vtv vitla
vtv vitla

ಪ್ರಾಣಿಯ ಅಸ್ಥಿಪಂಜರಕ್ಕೆ ಬೆಂಕಿ!

ಈ ಮಧ್ಯೆ ಕಡಬ ಠಾಣಾ ಎಸ್.ಐ. ರುಕ್ಮ ನಾಯ್ಕ್ ಅವರು ದಾಳಿ ನಡೆಸಿ ಮಾಲಕನನ್ನು ಹಾಗೂ ಪ್ರಾಣಿಯ ದೇಹದ ಭಾಗವೊಂದನ್ನು ವಶಪಡಿಸಿಕೊಂಡು ಠಾಣೆಗೆ ಕರೆ ತಂದ ಕೂಡಲೇ ಎಸ್ಟೇಟ್ನ ಒಳಗಡೆ ಪ್ರಾಣಿಗಳ ಅಸ್ಥಿಪಂಜರಕ್ಕೆ ಬೆಂಕಿ ನೀಡಿ ಸುಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ,

ಅರಣ್ಯ ಇಲಾಖೆಯವರು ಎಚ್ಚೆತ್ತುಕೊಳ್ಳಿ-ಗ್ರಾಮಸ್ಥರ ಆಗ್ರಹ

ಎಸ್ಟೇಟ್ ಒಳಗಡೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದ ಕಾರಣ ಅಲ್ಲಿ ನಡೆಯುವ ಚಟುವಟಿಕೆಗಳು ಯಾರಿಗೂ ತಿಳಿಯುತ್ತಿಲ್ಲ ಎನ್ನಲಾಗಿದ್ದು ಆದರೂ ಅಲ್ಲಿಯ ಚಟುವಟಿಕೆಗಳ ಬಗ್ಗೆ ಗ್ರಾಮಸ್ಥರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಎಸ್ಟೇಟ್ ಒಳಗಡೆ ಕಾಡು ಪ್ರಾಣಿಗಳ ಹತ್ಯೆಯಾಗುತ್ತಿರುವ ಬಗ್ಗೆ ಗುಮಾನಿಯಿದ್ದು ಅರಣ್ಯ ಇಲಾಖೆಯವರು ಹಾಗೂ ಪೋಲಿಸರು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!