Thursday, July 23, 2026
spot_imgspot_img
spot_imgspot_img

ಒಮಿಕ್ರಾನ್​ ಭೀತಿ: ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಿದ ಕೇಂದ್ರ ಸರ್ಕಾರ

- Advertisement -
- Advertisement -
vtv vitla
vtv vitla

ನವದೆಹಲಿ: ದೇಶದಲ್ಲಿ ಒಮಿಕ್ರಾನ್​ ಭೀತಿ ಹಿನ್ನೆಲೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ.

ದೇಶದಲ್ಲಿ ಸದ್ಯ ಒಮಿಕ್ರಾನ್​ ವೈರಸ್​ ಆತಂಕ ಎಲ್ಲೆಡೆ ಮನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್​ ಪತ್ತೆಯಾಗಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ನಮ್ಮ ರಾಜ್ಯಕ್ಕೂ ಕಾಲಿಟ್ಟಿತ್ತು ಕೋವಿಡ್​ ರೂಪಾಂತರಿ ವೈರಸ್. ಹೀಗಾಗಿ ದೇಶದೆಲ್ಲೆಡೆ ಒಮಿಕ್ರಾನ್​ ವೈರಸ್​ ಅನ್ನು ಕಟ್ಟಿಹಾಕುವ ಕುರಿತು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 2022ರ ಜನವರಿ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದು ಮಾಡಿ ಆದೇಶಿಸಿದೆ.

ಸರಕು ಸಾಗಣೆ ವಿಮಾನಗಳನ್ನ ಹೊರತು ಪಡಿಸಿ ಉಳಿದ ವಿಮಾನಗಳ‌ ರದ್ದು ಮಾಡಲಾಗಿದೆ. ಆಯ್ದ ಮಾರ್ಗಗಳ ವಿಮಾನಗಳಿಗೆ ಮಾತ್ರ ಹಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಕೇಂದ್ರ ವಿಮಾನಯಾನ ಇಲಾಖೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ.

vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!