Friday, May 17, 2024
spot_imgspot_img
spot_imgspot_img

ಕಟೀಲು ದೇವಸ್ಥಾನದಲ್ಲಿ ಅ.14ರ ತನಕ ಭಕ್ತರಿಗೆ ದೇವಳ ದರ್ಶನದ ಸಮಯದಲ್ಲಿ ಬದಲಾವಣೆ

- Advertisement -G L Acharya panikkar
- Advertisement -

ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ಅ.7ರಿಂದ 14ರ ತನಕ ಭಕ್ತರು ದೇವರ ದರ್ಶನ ಮಾಡುವ ಸಮಯ ಬದಲಾವಣೆ ಮಾಡಲಾಗಿದೆ.

ನವರಾತ್ರಿ ಸಂದರ್ಭ ದೇವರಿಗೆ ಎರಡು ಅಭಿಷೇಕ ಹಾಗೂ ಅಲಂಕಾರ ಇರುವುದರಿಂದ ಮಧ್ಯಾಹ್ನದ 2.30ರಿಂದ ಸಂಜೆ 5ರ ತನಕ ದರ್ಶನ ಇರುವುದಿಲ್ಲ. ಭಕ್ತರಿಗೆ ಬೆಳಗ್ಗೆ 7ರಿಂದ 10.30ರ ವರೆಗೆ, ಮಧ್ಯಾಹ್ನ 11ರಿಂದ 2.30ರ ವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 10ರ ವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ.

ಅ.15ರ ಬಳಿಕ ಯಥಾಪ್ರಕಾರ ದೇವರ ದರ್ಶನ ನಿರಂತರ ಇರುತ್ತದೆ. ಕೊರೊನಾ ನಿಯಾಮಾವಳಿ ಪಾಲನೆ ಹಿನ್ನಲೆಯಲ್ಲಿ ನವರಾತ್ರಿ ಸಂದರ್ಭ 10ರಂದು ಲಲಿತಾ ಪಂಚಮಿಯಂದು ಶ್ರೀ ದೇವರ ಶೇಷ ವಸ್ತ್ರ ವಿತರಣೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

driving
- Advertisement -

Related news

error: Content is protected !!