- Advertisement -
- Advertisement -
ಕಡಬ: ಆಲಂಕಾರು ಗ್ರಾಮದ ಯುವಕನೊಬ್ಬ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಆಲಂಕಾರು ಗ್ರಾಮದ ನಾಡ್ತಿಲ ನಿವಾಸಿ ಉಮೇಶ ದೇವಾಡಿಗರವರ ಪುತ್ರ ಯತೀಶ್ ಎನ್.ದೇವಾಡಿಗ (32) ಮೃತಪಟ್ಟ ಯುವಕ.

ಮೃತರು ಇಂಜೀನಿಯರ್ ಪದವಿದಾರನಾಗಿದ್ದು ಬೆಂಗಳೂರಿನಲ್ಲಿ ಐ.ಟಿ.ಬಿ.ಟಿ ಇಂಜೀನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡು ವಾರದ ಹಿಂದೆ ಊರಿಗೆ ಅಗಮಿಸಿದ್ದು, ಅನಾರೋಗ್ಯದಿಂದಾಗಿ ಪುತ್ತೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಮೆ.7 ರಂದು ಕೊವೀಡ್ ನಿಂದಾಗಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಮೂರನೇ ಪ್ರಕರಣ ಇದಾಗಿದೆ.

ಮೃತರು ತಂದೆ ಉಮೇಶ ದೇವಾಡಿಗ, ತಾಯಿ ಪುಷ್ಪಾವತಿ, ಪತ್ನಿ ಸುಚೇತಾ, ಸಹೋದರಿಯರಾದ ಚೈತ್ರ ಹಾಗು ಮಂಜುಳಾರವರನ್ನು ಅಗಲಿದ್ದಾರೆ.

- Advertisement -








