Monday, September 14, 2026
spot_imgspot_img
spot_imgspot_img

ಕಡಬ: ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿ, ಗರ್ಭಿಣಿಯನ್ನಾಗಿಸಿದ ಮಾವ; ಆರೋಪಿ ವಿರುದ್ಧ ಪ್ರಕರಣ ದಾಖಲು..!

- Advertisement -
- Advertisement -

ಕಡಬ: ವ್ಯಕ್ತಿಯೋರ್ವ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಘಟನೆ ಕಡಬದಲ್ಲಿ ನಡೆದಿದ್ದು, ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

ಕಡಬ ತಾಲೂಕಿನ ಕೊಂಬಾರು ನಿವಾಸಿ ರುಕ್ಮಯ್ಯ(31) ಎಂಬಾತ ಆರೋಪಿ.

ಆರೋಪಿ ರುಕ್ಮಯ್ಯ ಸಂತ್ರಸ್ತೆಯ ಮಾವನಾಗಿದ್ದು, ಸಂತ್ರಸ್ತ ಬಾಲಕಿ 3 ವರ್ಷಗಳ ಹಿಂದೆ ಆತನ ಮನೆಗೆ ಮಕ್ಕಳನ್ನು ನೋಡಿಕೊಳ್ಳಲು ಹೋದ ಸಂದರ್ಭದಲ್ಲಿ ಬಾಲಕಿ ಮೇಲೆ ರುಕ್ಮಯ್ಯ ಅತ್ಯಾಚಾರ ಎಸಗಿದ್ದಾನೆ.

ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಒಂದು ದಿನ ಸಂತ್ರಸ್ತ ಬಾಲಕಿಯನ್ನು ಬಲವಂತವಾಗಿ ಮನೆಯಲ್ಲಿ ಎಲ್ಲರೂ ಮಲಗಿದ ವೇಳೆ ಮನೆಯ ಹಾಲ್‌ನ ಪಕ್ಕದಲ್ಲಿರುವ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ಈ ವಿಷಯವನ್ನು ಯಾರಿಗೂ ಹೇಳಬೇಡ ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ, ನೀನು ಏನಾದರೂ ಈ ವಿಷಯವನ್ನು ಹೇಳಿದರೆ ನಿನ್ನನ್ನು ಮನೆಯಿಂದ ಓಡಿಸಿಬಿಡುತ್ತೇನೆ ಎಂದು ಬೆದರಿಸಿರುತ್ತಾನೆ. ಅದಲ್ಲದೆ 4-5 ಬಾರಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ.

ಸೆ.9ರಂದು ಕೊಂಬಾರು ಗ್ರಾಮಕ್ಕೆ ಬರುವ ಆಶಾಕಾರ್ಯಕರ್ತೆ ಸುನಿತಾ ಎಂಬವರು ಸಂತ್ರಸ್ತ ಬಾಲಕಿಯ ಹೊಟ್ಟೆಯನ್ನು ನೋಡಿ ಎಷ್ಟು ತಿಂಗಳು ಎಂದು ಕೇಳಿ ವಿಚಾರಿಸಿರುತ್ತಾರೆ. ಆ ಸಮಯದಲ್ಲಿ ಬಾಲಕಿ ಆಶಾಕಾರ್ಯಕರ್ತೆಗೆ ತನ್ನ ಮಾವನಾದ ರುಕ್ಮಯ್ಯ ಲೈಂಗಿಕವಾಗಿ ಬಳಸಿಕೊಂಡಿರುವ ಬಗ್ಗೆ ತಿಳಿಸಿದ್ದು, ಆಶಾಕಾರ್ಯಕರ್ತೆ ಸುನಿತಾರವರು ಪ್ರಗ್ನೆನ್ಸಿ ಟೆಸ್ಟ್ ಕಿಟ್‌ ತೆಗೆದುಕೊಂಡು ಟೆಸ್ಟ್ ಮಾಡಿದಾಗ ಬಾಲಕಿ ಗರ್ಬೀಣಿಯಾಗಿರುವುದು ತಿಳಿದಿರುತ್ತದೆ.

ಬಾಲಕಿಯನ್ನು ಬಲವಂತವಾಗಿ 4-5 ಬಾರಿ ಲೈಂಗಿಕ ಕ್ರಿಯೆ ಮಾಡಿ ಗರ್ಭೀಣಿಯಾಗಲು ಕಾರಣನಾದ ರುಕ್ಮಯ್ನನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಬಾಲಕಿ ನೀಡಿದ ದೂರಿನನ್ವಯ ಆರೋಪಿ ರುಕ್ಮಿಯ್ಯನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!