Friday, May 3, 2024
spot_imgspot_img
spot_imgspot_img

ಕಡಬ: “ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ ಪ್ರಕರಣ; ದೂರು ಪ್ರತಿ ದೂರು.!?

- Advertisement -G L Acharya panikkar
- Advertisement -

ಕಡಬ: ಬೆಡ್ ಶೀಟ್ ಮಾರಾಟದ ನೆಪದಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ದೂರು ಪ್ರತಿ ದೂರು ದಾಖಲಾಗಿದೆ.

ನಿನ್ನೆ ವರದಿಯಾಗಿದ್ದ ಘಟನೆ ಹಾಗೂ ಮಹಿಳೆಯ ದೂರು!?

ಕಡಬ ತಾಲೂಕಿನ ದೋಲ್ಪಾಡಿ ಗ್ರಾಮದ ಕಾಯರ್ ಮನೆ ಎಂಬಲ್ಲಿಗೆ ಕಾರಿನಲ್ಲಿ ಬಂದ ಆರೋಪಿಗಳಾದ ರಫೀಕ್ ಹಾಗೂ ರಮಿಯಾಸುದ್ದೀನ್ ಎಂಬವರು ಬೆಡ್ ಶೀಟ್ ಮಾರಾಟದ ನೆಪದಲ್ಲಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದು, ಮಹಿಳೆ ವಿರೋಧಿಸಿದಾಗ ಮೈ, ಕೈ ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಹಿಳೆ ಬೊಬ್ಬೆ ಹೊಡೆದಾಗ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಮಹಿಳೆ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಳಲಿ ನಿವಾಸಿಗಳಾದ ರಮೀಶುದ್ಧೀನ್ (25) ಹಾಗೂ ರಫೀಕ್ (30) ಅತ್ಯಾಚಾರಕ್ಕೆ ‌ಯತ್ನಿಸಿದವರು. ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದಿದ್ದ ಆರೋಪಿಗಳು, ಮನೆಯಲ್ಲಿ ಮಹಿಳೆ ಒಬ್ಬರೇ ಇದ್ದುದನ್ನ ಗಮನಿಸಿ ಮನೆಗೆ ಹೋಗಿದ್ದಾರೆ. ಈ ವೇಳೆ ಬೆಡ್ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಚಿನ್ನದ ಸರ ಎಗರಿಸಲು ಯತ್ನಿಸಿದ್ದಾರೆ‌. ಅಲ್ಲದೇ ‌ಮಹಿಳೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾಗಿ ಮಹಿಳೆ ದೂರಿದ್ದಾರೆ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದಾಗ ಕಾರಿನಲ್ಲಿ ಪರಾರಿಯಾದ ಆರೋಪಿಗಳು, ವೇಗವಾಗಿ ಪರಾರಿಯಾಗುವ ವೇಳೆ ಕಾರು ಪಲ್ಟಿಯಾಗಿ ಅಪಘಾತ ನಡೆದಿದೆ. ಆರೋಪಿಗಳನ್ನ ಹಿಂಬಾಲಿಸುತ್ತಿದ್ದ ಸ್ಥಳೀಯರು ಪಲ್ಟಿಯಾದ ಕಾರಿನಿಂದ ಹೊರಗೆಳೆದು ಆರೋಪಿಗಳಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಥಳಿತದ ವಿಡಿಯೋ ವೈರಲ್ ಆಗಿದೆ‌. ಮಹಿಳೆ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಅತ್ಯಾಚಾರ ಯತ್ನ ಕೇಸ್ ದಾಖಲಾಗಿದೆ.‌

ಆರೋಪಿತರ ದೂರು::

ರಮೀಜುದ್ದಿನ್ ಎಂಬತ ಆತನ ಸಂಬಂಧಿಕ ಮಹಮ್ಮದ್ ರಫೀಕ್ ಎಂಬವನೊಂದಿಗೆ ಬೆಡ್ ಶೀಟ್ ಮಾರಾಟಕ್ಕೆಂದು ದಿನಾಂಕ 20.10.2022ರಂದು ಕಡಬ ತಾಲೂಕು ಎಡಮಂಗಲ ಹಾಗೂ ದೋಲ್ಪಾಡಿ ಗ್ರಾಮ ಪರಿಸರದಲ್ಲಿ ಕಾರಿನಲ್ಲಿ ಬಂದು ಮಾರಾಟ ಮಾಡುತ್ತಿರುವ ವೇಳೆ ಮನೆಯೊಂದರದಲ್ಲಿದ್ದ ಹೆಂಗಸರ ಜೊತೆ ಬೆಡ್ ಶೀಟ್ ಮಾರಾಟದ ವಿಚಾರದಲ್ಲಿ ತಕರಾರು ಉಂಟಾಗಿ ಅಲ್ಲಿಂದ ವಾಪಸ್ಸು ಕಾಣಿಯೂರು ಕಡೆಗೆ ಬರುತ್ತಿರುವಾಗ, ಕಾಣಿಯೂರು ಗ್ರಾಮದ ಬೆದ್ರಾಜೆ ಎಂಬಲ್ಲಿಗೆ ಮಧ್ಯಾಹ್ನ 2.00ಗಂಟೆಗೆ ತಲುಪಿದಾಗ ಅಲ್ಲಿ ಗುಂಪು ಸೇರಿದವರು ಪಿಕಪ್ ವಾಹನವೊಂದನ್ನು ರಸ್ತೆಗೆ ಅಡ್ಡವಾಗಿಟ್ಟು. ಇವರು ಚಲಾಯಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಅವರನ್ನು ಹಾಗೂ ಜೊತೆಯಲ್ಲಿದ್ದ ಮಹಮ್ಮದ್ ರಫೀಕ್ ರವರನ್ನು ಕಾರಿನಿಂದ ರಸ್ತೆಗೆ ಬೀಳಿಸಿ ಅವಾಚ್ಯ ಶಬ್ದಗಳಿಂದ ಬೈದು ಕೆಲವರ ಕೈಯಲ್ಲಿದ್ದ ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ , ಕೈಯಿಂದ ಹೊಡೆದು ಕಾಲಿನಿಂದ ತುಳಿದು ರಸ್ತೆಯಲ್ಲಿ ಎಳೆದಾಡಿ, ಹಲ್ಲೆನಡೆಸಿ , ಕಾರನ್ನು ಜಾಖಂ ಗೊಳಿಸಿ ಸುಮಾರು 1.50.000/. ಲಕ್ಷಗಳಷ್ಟು ನಷ್ಟ ಹಾಗೂ ಕಾರಿನಲ್ಲಿದ್ದ ಬೆಡ್ ಶೀಟ್ ಗಳನ್ನೂ ಬಿಸಾಡಿ ರೂ 25,000/ನಷ್ಟವನ್ನುಂಟು ಮಾಡಿರುತ್ತಾರೆ ಎನ್ನಲಾಗಿದೆ.

- Advertisement -

Related news

error: Content is protected !!