Friday, May 17, 2024
spot_imgspot_img
spot_imgspot_img

ಕಡಿಮೆ ಕ್ಯಾಲೋರಿಯಿರುವ ಈ ಆಹಾರಗಳನ್ನು ಸೇವಿಸಿ: ದೇಹದ ಅತಿಯಾದ ತೂಕ ಇಳಿಸಿಕೊಳ್ಳಿ

- Advertisement -G L Acharya panikkar
- Advertisement -
suvarna gold

ಆರೋಗ್ಯಯುತ ಜೀವನ ಶೈಲಿಗೆ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಡೆಯೆಟ್ ಪಟ್ಟಿಯಲ್ಲಿ ಸರಿಯಾದ ಕ್ರಮದಲ್ಲಿ ಆಹಾರವನ್ನು ಸೇರಿಸಿ ಸೇವಿಸಿದರೆ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತದೆ. ಹೀಗಾಗಿ ಡಯೆಟ್​ ರೂಲ್ಸ್​ ಸರಿಯಾಗಿರಲಿ. ಕೆಲವೊಮ್ಮೆ ಡಯೆಟ್​ ಆಹಾರಗಳಸು ದೇಹಕ್ಕೆ ಸಾಕಾಗುವುದಿಲ್ಲ ಅಂತಹ ಸಂದರ್ಭಗಳಲ್ಲಿ ಮನಸ್ಸು ಸಿಹಿ ಅಥವಾ ಕರಿದ ಪದಾರ್ಥಗಳೆಡೆಗೆ ಎಳೆಯುತ್ತದೆ. ಅದನ್ನು ತಪ್ಪಿಸಲು ನೀವು ಡಯೆಟ್​ನಲ್ಲಿಯೇ ಕಡಿಮೆ ಕ್ಯಾಲೋರಿ ಮತ್ತು ದೇಹದ ತೂಕ ಹೆಚ್ಚಿಸದೇ ಅರೋಗ್ಯವನ್ನೂ ಉತ್ತಮವಾಗಿಡುವಂತಹ ಆಹಾರಗಳನ್ನು ಸೇವಿಸಿ. ಆಗ ನಿಮಗೆ ಹಸಿವನ್ನೂ ನಿಯಂತ್ರಿಸಬಹುದು. ಜತೆಗೆ ದೇಹದ ತೂಕವನ್ನೂ ಸರಿಯಾಗಿ ನಿರ್ವಹಿಸಬಹುದು. ಆದ್ದರಿಂದ ಆರೋಗ್ಯಯುತ ಜೀವನಕ್ಕೆ ಆಹಾರ ಶೈಲಿ ಅತೀ ಮುಖ್ಯವಾಗಿದೆ. ಹಾಗಾದರೆ ಯಾವೆಲ್ಲ ಆಹಾರಗಳು ನೆಗೆಟಿವ್​ ಕ್ಯಾಲೊರಿಗಳನ್ನು ಹೊಂದಿವೆ? ನಿಮ್ಮ ದೇಹದ ತೂಕ ನಿರ್ವಹಣೆಗೆ ಸೇವಿಸಬಹುದಾದ ಆಹಾರಗಳು ಯಾವೆಲ್ಲ ಎನ್ನುವ ಮಾಹಿತಿ ಇಲ್ಲಿದೆ.

ಸೆಲರಿ
ತರಕಾರಿಯಾಗಿ ಬಳಸಲಾಗುವ ಏಪಿಯೇಸಿಯಿ ಕುಟುಂಬದಲ್ಕ್ಕೆ ಸೇರಿದ ಒಂದು ಬಗೆಯ ಸಸ್ಯವನ್ನು ಸೆಲರಿ ಎಂದು ಕರೆಯುತ್ತಾರೆ. ಇದು ನೆಗೆಟಿವ್​ ಕ್ಯಾಲೋರಿಗಳನ್ನು ಹೊಂದಿರುವ ತರಕಾರಿಯಾಗಿದೆ. ಇದರಲ್ಲಿನ ವಿಟಮಿನ್​ ಎ,ಸಿ ಮತ್ತು ಫೈಬರ್​ ಅಂಶಗಳು ಹಸಿವೆಯನ್ನು ನಿಯಂತ್ರಿಸುತ್ತದೆ. ಅಲ್ಲದೆ ಶೇ 95 ಪ್ರತಿಶತದಷ್ಟು ನೀರಿನ ಅಂಶವನ್ನು ಹೊಂದಿರುವ ಸೆಲರಿ ಎಲೆಗಳು ದೇಹವನ್ನು ನಿರ್ಜಲೀಕರಣಗೊಳ್ಳದಂತೆ ತಡೆಯುತ್ತದೆ.

ಬೆರಿ ಹಣ್ಣುಗಳು
ದೇಹಕ್ಕೆ ಬೇಕಾದ ಮಿನರಲ್ಸ್​, ವಿಟಮಿನ್​ ಸಿ, ಆ್ಯಂಟಿಆಕ್ಸಿಡೆಂಟ್​ಗಳನ್ನು ಸಮೃದ್ಧವಾಗಿ ಹೊಂದಿರುವ ಬೆರಿ ಹಣ್ಣುಗಳು ದೇಹವನ್ನು ಆರೋಗ್ಯವಾಗಿಡಲು ಮತ್ತು ಹಸಿವೆಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅವುಗಳು ಬ್ಲೂ ಬೆರಿಗಳಿರಬಹುದು ಅಥವಾ ಬ್ಲ್ಯಾಕ್​ ಬೆರಿ ಹಣ್ಣುಗಳಿರಬಹುದು ಎಲ್ಲವೂ ದೇಹದ ಅರೋಗ್ಯಕ್ಕೆ ಉತ್ತಮವಾಗಿದೆ ಎನ್ನುತ್ತಾರೆ ತಜ್ಞರು. ಕೇವಲ 32 ಪ್ರತಿಷತದಷ್ಟು ಕ್ಯಾಲೋರಿಗಳನ್ನು ಅರ್ಧ ಕಪ್​ ಬೆರಿ ಹಣ್ಣುಗಳು ಹೊಂದಿರುತ್ತವೆ.

vtv vitla

ಸೌತೆಕಾಯಿ
ಬೇಸಿಗೆಯಲ್ಲಿ ಸಲಾಡ್​ಗಳ ರೂಪದಲ್ಲಿ ಸೇವಿಸಬಹುದಾದ ಉತ್ತಮ ಆಹಾರ ಸೌತೆಕಾಯಿ. ಯಥೇಚ್ಛವಾದ ನೀರಿನ ಅಂಶ ಹೊಂದಿರುವ ಸೌತೆಕಾಯಿ ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಕೇವಲ 15 ಪ್ರತಿಷತದಷ್ಟು ಕ್ಯಾಲೋರಿಗಳನ್ನು ಹೊಂದಿರುವ ಸೌತೆಕಾಯಿಗಳು ಮಧುಮೇಹಿಗಳಿಗೂ ಉತ್ತಮ ಆಹಾರವಾಗಿದೆ.

ಚೀನಿಕಾಯಿ
ಯಥೇಚ್ಛವಾದ ಪೈಟೋನ್ಯೂಟ್ರಿಂಟ್ಸ್​ಗಳನ್ನು ಹೊಂದಿರುವ ಚೀನಿಕಾಯಿ ಕುಂಬಳಕಾಯಿಯನ್ನು ಹೋಲುತ್ತದೆ. 100 ಗ್ರಾಂನಲ್ಲಿ 18 ರಷ್ಟು ಕ್ಯಾಲೋರಿಗಳನ್ನು ಹೊಂದಿರುವ ಚೀನಿಕಾಯಿ ವೈದ್ಯರು ಸಲಹೆ ನೀಡುವ ಕಡಿಮೆ ಕ್ಯಾಲೋರಿಗಳ ತರಕಾರಿಗಳಲ್ಲಿ ಒಂದಾಗಿದೆ.

ಕ್ಯಾರೆಟ್
ಹಲವು ಆರೋಗ್ಯಯುತ ಗುಣಗಳನ್ನು ಹೊಂದಿರುವ ತರಕಾರಿಗಳಲ್ಲಿ ಕ್ಯಾರೆಟ್​ ಮುಂಚೂಣಿಯಲ್ಲಿ ಸಿಗುತ್ತದೆ. 100 ಗ್ರಾಂನಲ್ಲಿ 41ರಷ್ಟು ಕ್ಯಾಲೋರಿಗಳನ್ನು ಹೊಂದಿರುವ ಕ್ಯಾರೆಟ್​ ಮ್ಯಾಂಗನೀಸ್​, ಪೊಟ್ಯಾಷಿಯಂ, ವಿಟಮಮಿನ್​ ಎ,ಇ,ಸಿ,ಕೆ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಕಡಿಮೆ ಕ್ಯಾಲೋರಿಯಿರುವ ಆಹಾರಗಳಲ್ಲಿ ಕ್ಯಾರೆಟ್​ ಕೂಡ ಒಂದು. ಆದ್ದರಿಂದ ನಿಮ್ಮ ಡಯೆಟ್​ ಪಟ್ಟಿಯಲ್ಲಿ ಕ್ಯಾರೆಟ್​ ಇದ್ದರೆ ಆರೋಗ್ಯಕ್ಕೂ ಒಳಿತು, ಹಸಿವನ್ನೂ ನಿಯಂತ್ರಿಸುತ್ತದೆ.

vtv vitla
vtv vitla
- Advertisement -

Related news

error: Content is protected !!