- Advertisement -
- Advertisement -

ಪುತ್ತೂರು: ಕಬಕ ಗ್ರಾಮದ ಪೆರಿಯತ್ತೋಡಿಯಲ್ಲಿ ಮಹಿಳೆಯೊಬ್ಬರು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ನೈಟಿಗೆ ಬೆಂಕಿ ಹತ್ತಿಕೊಂಡು ತೀವ್ರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಬಕ ಗ್ರಾಮದ ಪೆರಿಯತ್ತೋಡಿ ದಿ.ರಾಮಣ್ಣ ಎಂಬವರ ಪತ್ನಿ ಕಮಲ(59ವ) ಅವರು ಮೃತಪಟ್ಟವರು. ಅವರು ಮಾ.4ರಂದು ಮಧ್ಯಾಹ್ನ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಅವರ ನೈಟಿಗೆ ಬೆಂಕಿ ತಗುಲಿತ್ತು. ಬೆಂಕಿಯ ಕೆನ್ನಾಲಿಗೆ ಪೂರ್ತಿ ಅವರನ್ನು ಆವರಿಸಿದ್ದು, ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ಪುತ್ರರಾದ ದಯಾನಂದ, ಚಂದ್ರ, ಸುರೇಶ್, ಶಿವಾನಂದ ಅಗಲಿದ್ದಾರೆ.


- Advertisement -








