Monday, May 6, 2024
spot_imgspot_img
spot_imgspot_img

ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ಅಗ್ನಿ ಅವಘಡ; ನಾಲ್ಕು ಮಕ್ಕಳು ಸಾವು!

- Advertisement -G L Acharya panikkar
- Advertisement -

ಮಧ್ಯಪ್ರದೇಶದ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್​​ನಲ್ಲಿ ನಡೆದ ಬೆಂಕಿ ದುರಂತದಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಮೂರನೇ ಫ್ಲೋರ್​​ನಲ್ಲಿರುವ ಮಕ್ಕಳ ವಾರ್ಡ್​​ನಲ್ಲಿ, ನವಜಾತ ಶಿಶುಗಳೂ ಸೇರಿ ಒಟ್ಟು 40 ಮಕ್ಕಳು ದಾಖಲಾಗಿದ್ದರು. ಅದರಲ್ಲಿ ನಾಲ್ಕು ಮಕ್ಕಳು ಮೃತಪಟ್ಟಿದ್ದು, ಉಳಿದ 36 ಮಂದಿಯನ್ನು ಸುರಕ್ಷಿತ ಮಾಡಲಾಗಿದೆ.

ಸುಮಾರು 12ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸಿದ್ದಾರೆ. ಪ್ರಕರಣದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಆದೇಶಿಸಿದ್ದು ಅಲ್ಲದೇ ಮೃತಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ನಿನ್ನೆ ಸಂಜೆ ಈ ದುರ್ಘಟನೆ ನಡೆದಿತ್ತು. ಮಕ್ಕಳನ್ನು ಪಾರು ಮಾಡಲು ಕೂಡಲೇ ರಕ್ಷಣಾ ಕಾರ್ಯಾಚರಣೆಯೂ ನಡೆದಿತ್ತು. ಹಲವು ರೋಗಿಗಳನ್ನುಸ್ಟ್ರೆಚರ್​​ನಲ್ಲಿ ಹಾಕಿ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟಾದರೂ ನಾಲ್ಕು ಮಂದಿ ಮಕ್ಕಳು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಬೆಂಕಿ ಬೀಳುತ್ತಿದ್ದಂತೆ ಅಲ್ಲಿ ಅಡ್ಮಿಟ್​ ಆದ ಮಕ್ಕಳ ಕುಟುಂಬದವರು ಆತಂಕದಿಂದ ಅಲ್ಲಿಗೆ ಧಾವಿಸಿದ್ದರು.

- Advertisement -

Related news

error: Content is protected !!