Friday, May 17, 2024
spot_imgspot_img
spot_imgspot_img

ಕರಾವಳಿಯಲ್ಲಿ ಯು ಪಿ ಗ್ಯಾಂಗ್ ಇದೆ ಎಚ್ಚರ; ಪಾರ್ಕಿಂಗ್ ಮಾಡಿದ್ದ ಕಾರುಗಳೇ ಇವರ ಟಾರ್ಗೆಟ್!

- Advertisement -G L Acharya panikkar
- Advertisement -

ಮಂಗಳೂರು: ಕರಾವಳಿಯಲ್ಲಿ ಉತ್ತರ ಪ್ರದೇಶ ಮೂಲದ ಗ್ಯಾಂಗೊಂದು ಮಂಗಳೂರಿನ ವಿವಿಧೆಡೆ ನಿಲ್ಲಿಸಿದ ಕಾರನ್ನು ಟಾರ್ಗೆಟ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಗ್ಯಾಂಗ್, ಕಾರಿನ ಗಾಜು ಒಡೆದು ಅದರಲ್ಲಿನ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದೆ.

ಈ ಸರಣಿ ಕೃತ್ಯಗಳ ಹಿಂದೆ ಉತ್ತರ ಪ್ರದೇಶ ರಾಜ್ಯದ ಕುಖ್ಯಾತ ಓಜಿ ಕೊಪ್ಪಮ್ ಗ್ಯಾಂಗ್ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೊದಲ ಘಟನೆಯಲ್ಲಿ ಲ್ಯಾಪ್‌ಟಾಪ್‌ ಸೇರಿದಂತೆ ಐಫೋನ್ ಹಾಗೂ ಬ್ಯಾಂಕ್‌ಗಳ ಚೆಕ್ ಹಾಳೆಗಳನ್ನು ಕಳವು ಮಾಡಲಾಗಿದ್ದರೆ,

ಎರಡನೇ ಪ್ರಕರಣದಲ್ಲಿ ಸುಮಾರು 40,000 ರೂ. ಹಣ ಹಾಗೂ ದಾಖಲೆಗಳನ್ನು ಒಳಗೊಂಡ ಬ್ಯಾಗನ್ನು ಕಳವುಮಾಡಿರುವ ಘಟನೆ ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಉರ್ವಾಸ್ಟೋರ್ ಮತ್ತು ಬಂದರು ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠದಲ್ಲಿ ಇಂತಹ ಘಟನೆಗಳು ನಡೆದಿದೆ.

ಕರ್ನಾಟಕದ ವಿವಿಧ ಕಡೆಗಳಲ್ಲಿ ಈ ಗ್ಯಾಂಗ್ ನ ಹಲವಾರು ಆರೋಪಿಗಳನ್ನು ಬಂಧಿಸಲಾಗಿದೆ. ಆಗಸ್ಟ್ 6 ರಂದು ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಚೈತ್ರಾ ಶೆಟ್ಟಿ ಎನ್ನುವವವರು ತನ್ನ ಸ್ನೇಹಿತ ಶ್ರೀನಿವಾಸ್ ಭಟ್ ಎನ್ನುವವರ ಕಾರಿನಲ್ಲಿ ಕೊಲ್ಲೂರು, ಕಟೀಲು, ಮಂಗಳೂರಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಅವರು ಸಂಜೆ ಉಡುಪಿಗೆ ವಾಪಾಸ್ಸಾಗುವ ವೇಳೆಗೆ ನಗರದ ಸಿಟಿ ಸೆಂಟರ್‌ನ ಟ್ರೆಂಡ್‌ ಫುಟ್‌ವೇರ್‌ ಅಂಗಡಿ ಬಳಿ ತನ್ನ ಕಾರನ್ನು ನಿಲ್ಲಿಸಿ ಹೋಟೆಲ್‌ನಿಂದ ಊಟ ಪಾರ್ಸೆಲ್ ತರಲು ಹೋಗಿದ್ದರು. ಈ ವೇಳೆ ಹೋಟೆಲ್‌ನಿಂದ ವಾಪಾಸ್ಸು ಬಂದು ನೋಡಿದಾಗ ಕಾರಿನ ಹಿಂಬದಿಯ ಗ್ಲಾಸ್ ಒಡೆದು ಲ್ಯಾಪ್‌ಟಾಪ್ ಕಳವು ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

driving
- Advertisement -

Related news

error: Content is protected !!