Friday, April 19, 2024
spot_imgspot_img
spot_imgspot_img

ಕಲ್ಲಡ್ಕ: ಭಾರತೀಯ ನಿವೃತ್ತ ಸೇನಾಧಿಕಾರಿಯಿಂದ ಶ್ರೀರಾಮ ಶಾಲೆಗೆ ಭೇಟಿ

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

” ವಿದ್ಯಾರ್ಥಿಗಳೆಲ್ಲರೂ ಶಾಲಾ ಶಿಕ್ಷಣದೊಂದಿಗೆ ಸೇನೆಗೆ ಸೇರುವ ಸಂಕಲ್ಪವನ್ನು ಕೈಗೊಳ್ಳಬೇಕು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಪುಣ್ಯದ ಕೆಲಸ. ಅಂತಹ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದನ್ನು ನೀವೆಲ್ಲರೂ ಭವಿಷ್ಯದಲ್ಲಿ ಸೃಷ್ಟಿಸಿಕೊಳ್ಳಬೇಕು. ” ಎಂದು ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿಯಾದ ಕರ್ನಲ್ ಕೆ.ಟಿ ನಾಯಕ್ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.


ಅತಿಥಿಗಳು ಶಾಲೆಯಲ್ಲಿ ನಡೆಯುವ ಸರಸ್ವತಿ ವಂದನೆ ಹಾಗೂ ನೂತನವಾಗಿ ನಿರ್ಮಿಸಿದ ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ರೂಮನ್ನು ವೀಕ್ಷಿಸಿದರು. ಹಾಗೆಯೇ ಶ್ರೀರಾಮ ವಿದ್ಯಾಕೇಂದ್ರದ 4000 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಿದರು ಹಾಗೂ ತಾವು ವಿದ್ಯಾರ್ಥಿಗಳ ಜೊತೆ ಸೇರಿ ಭೋಜನ ಸವಿದರು.

vtv vitla

ಈ ಸಂದರ್ಭದಲ್ಲಿ ಕರ್ನಲ್ ಕೆ.ಟಿ. ನಾಯಕ್ ನ ಸಹಧರ್ಮಿಣಿಯಾದ ಕುಸುಮಾವತಿ, ರಿಸರ್ವ್ ಬ್ಯಾಂಕು ಆಫ್ ಇಂಡಿಯಾದ ವ್ಯವಸ್ಥಾಪಕ ಅಜಿತ್ ಕುಮಾರ್ ಹಾಗೂ ಅವರ ಧರ್ಮಪತ್ನಿ ರಶ್ಮಿ, ಕೆ.ವಿ. ಜಿ ಬ್ಯಾಂಕ್ ನ ವ್ಯವಸ್ಥಾಪಕರಾದ ಅಜಯ್ ಕುಮಾರ್ ಹಾಗೂ ಸಹಧರ್ಮಿಣಿ ಜಯಶ್ರೀ, ಕೃಷ್ಣ ನಾಯಕ್ ಅಳಕೆಮಜಲು ಹಾಗೂ ಧರ್ಮಪತ್ನಿ ರತ್ನಾವತಿ, ಮತ್ತು ಕಿರಣ್ ರಾಜ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಶಾಲಾ ಸಂಚಾಲಕರಾದ ವಸಂತ ಮಾಧವ ಹಾಗೂ ಮುಖೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ರೂಪಕಲಾ ಎಂ ಸ್ವಾಗತಿಸಿ , ಪ್ರೀತಾ ಸ್ಥಾಗತಿಸಿದರು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!