Saturday, May 4, 2024
spot_imgspot_img
spot_imgspot_img

ಕಲ್ಲಡ್ಕ: ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ

- Advertisement -G L Acharya panikkar
- Advertisement -

ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಡಿಜಿಟಲ್ ಸೇವಾ ಕೇಂದ್ರವನ್ನು ಕಲ್ಲಡ್ಕ ವಲಯದ ಕಛೇರಿಯಲ್ಲಿ ಕೆ.ಎಸ್. ಬಿಲ್ಡಿಂಗ್ ನ ಮಾಲೀಕರು ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತ್ ನ ಸದಸ್ಯ ಮುಸ್ತಫಾ ರವರು ಉದ್ಘಾಟನೆ ಮಾಡಿದರು.

ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷ ಹಿರಣ್ಮಯಿರವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ರವರು ಡಿಜಿಟಲ್ ಸೇವಾ ಕೇಂದ್ರದ ಮೂಲಕ ಅ‌ಸಂಘಟಿತ ವಲಯದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷ ಈಶ್ವರ ನಾಯ್ಕ, ಕಲ್ಲಡ್ಕ ವಲಯಕ್ಕೆ ಸಂಬಂಧಿಸಿದ 9 ಒಕ್ಕೂಟಗಳ ಅಧ್ಯಕ್ಷರುಗಳಾದ ತುಳಸಿ, ಸೀತಾರಾಮ, ಮಮತಾ ಶೆಟ್ಟಿ, ದಯಾನಂದ ಗೌಡ, ಹರೀಶ್.ವಿ.ಮಾಡ, ಸೀತಾ, ಶಾಂಭವಿ, ಉಮಾವತಿ, ಹಾಗೂ ಒಕ್ಕೂಟಗಳ ಸೇವಾ ಪ್ರತಿನಿಧಿಗಳಾದ ಸೌಮ್ಯ,ಸುಕನ್ಯಾ, ಯಶೋಧ, ಲೀಲಾವತಿ, ರೇವತಿ, ವಿದ್ಯಾ ಉಪಸ್ಥಿತರಿದ್ದರು.

ಗೋಳ್ತಮಜಲು ಸಿ ಒಕ್ಕೂಟದ ಸೇವಾಪ್ರತಿನಿಧಿಯಾದ ಗಿರಿಜಾ ಸ್ವಾಗತಿಸಿ, ಗೋಳ್ತಮಜಲು ಎ ಒಕ್ಕೂಟದ ಸೇವಾಪ್ರತಿನಿಧಿಯಾದ ಕೌಶಿತ ವಂದಿಸಿದರು. ಕೆಲಿಂಜ ಒಕ್ಕೂಟದ ಸೇವಾ ಪ್ರತಿನಿಧಿಯಾದ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!