Wednesday, April 24, 2024
spot_imgspot_img
spot_imgspot_img

ಕಾಂಗ್ರೇಸ್‌ ಸೇರ್ಪಡೆ ಬಗ್ಗೆ ವಿಟ್ಲ ಬಿಜೆಪಿ ಅಧ್ಯಕ್ಷ ಮೋಹನ್‌ ಕಟ್ಟೆ ಸ್ಪಷ್ಟನೆ

- Advertisement -G L Acharya panikkar
- Advertisement -

ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ತಕ್ಕ ಉತ್ತರ ಕೊಡುತ್ತೇವೆ-ಅರುಣ್‌ ವಿಟ್ಲ

vtv vitla

ವಿಟ್ಲ: ಬಿಜೆಪಿ ಮಹಾಶಕ್ತಿ ಕೇಂದ್ರದ 8ನೇ ಬೂತ್‌ನ ಅಧ್ಯಕ್ಷ ಮೋಹನ್‌ ಕಟ್ಟೆ ಕಾಂಗ್ರೇಸ್‌ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ ಎಂದು ಮೋಹನ್‌ ಕಟ್ಟೆ ಸ್ಪಷ್ಟನೆ ನೀಡಿದ್ದಾರೆ.

ಮೋಹನ್‌ ಕಟ್ಟೆ ಸ್ಪಷ್ಟನೆ:

ನಾನು ಎಂಟನೇ ಬೂತ್‌ನ ಬಿಜೆಪಿ ಅಧ್ಯಕ್ಷ, ಸಕ್ರೀಯ ಕಾರ್ಯಕರ್ತನಾಗಿದ್ದೇನೆ ಕೆಲವೊಂದು ಸೋಶಿಯಲ್‌ ಮೀಡಿಯಾಗಳಲ್ಲಿ ಕಾಂಗ್ರೇಸ್‌ ಸೇರ್ಪಡೆಯಾಗಿದ್ದೇನೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದೊಂದು ಶುದ್ಧ ಸುಳ್ಳು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ನಮ್ಮ ಮನೆ ಸಂಘ ಪರಿವಾರದ ಮನೆ. ಹೀಗಿರುವಾಗ ಕಾಂಗ್ರೇಸ್‌ ಸೇರ್ಪಡೆ ವಿಚಾರ ಸುಳ್ಳಾಗಿದ್ದು, ಈ ಮೂಲಕ ಸ್ಪಷ್ಟಿಕರಣ ನೀಡುತ್ತಿದ್ದೇನೆ. ಸಂಘ ಪರಿವಾರ ಮತ್ತು ಪಕ್ಷದ ಘನತೆಗೆ ಧಕ್ಕೆ ಬಾರದಿರುವಂತೆ ಮುಂದೆಯೂ ಬದ್ಧತೆಯಿಂದ ಇರುತ್ತೇನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಕಾಂಗ್ರೇಸ್‌ನ ಇಂತಹ ಷಡ್ಯಂತ್ರಕ್ಕೆ ಭಾರತೀಯ ಜನತಾ ಪಾರ್ಟಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದೆ. ವಿಟ್ಲ ಭಾಗದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ. ಇಂತಹ ಕುಮ್ಮಕ್ಕುಗಳಿಗೆ ನಮ್ಮ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್‌ ವಿಟ್ಲರವರು ವಿಟಿವಿಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.

- Advertisement -

Related news

error: Content is protected !!