Thursday, March 28, 2024
spot_imgspot_img
spot_imgspot_img

ಕಾಪು: ಒಬ್ಬಂಟಿ ಮಹಿಳೆ ವಾಸವಿದ್ದ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು; ಮನೆ ಕೆಲಸದಾಕೆ ಅರೆಸ್ಟ್..!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla

ಕಾಪು: ಒಬ್ಬಂಟಿ ಮಹಿಳೆ ವಾಸವಿದ್ದ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮನೆಕೆಲಸದಾಕೆಯನ್ನು ಬಂಧಿಸಿದ್ದಾರೆ. ಬಂಧಿತೆ ಸುಭಾಸ್‌‌‌ನಗರ ನಿವಾಸಿ ಅನಿತಾ (39) ಎನ್ನಲಾಗಿದೆ.

vtv vitla

ಒಬ್ಬಂಟಿಯಾಗಿದ್ದ ಕಟಪಾಡಿ ಅಚ್ಚಡ ಹೌಸ್‌‌ನ ಜೋಸ್‌‌ ಫಿನ್‌‌‌ ಲೋಬೋ ಮನೆಯಲ್ಲಿ ಮನೆ ಕೆಲಸಕ್ಕೆ ಬರುತ್ತಿದ್ದ ಅನಿತಾ, ಅಜ್ಜಿಯ ಚಲನವಲಗಳನ್ನು ಗಮನಿಸಿ ಅವರು ಬೇರೆ ಕಡೆಯಲ್ಲಿದ್ದಾಗ ಮನೆಯಲ್ಲಿದ್ದ ಕಪಾಟಿನ ಕೀಯನ್ನು ತೆಗೆದು, ಬಳಿಕ ಚಿನ್ನಾಭರಣ ಕದ್ದಿದ್ದಳು.

ಸೆ.8ರಿಂದ ಅ.25ರ ನಡುವೆ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ತನ್ನ ಮಕ್ಕಳಿಗೆ ವಿಷಯ ತಿಳಿಸಿ ಮನೆಯಲ್ಲಿ ಹುಡುಕಾಡಿದ ನಂತರ ಜೋಸ್‌‌‌ ಫಿನ್‌ ಲೋಬೋ ಅವರು ಡಿ.9ರಂದು ಕಾಪು ಪೊಲೀಸರಿಗೆ ದೂರು ನೀಡಿದ್ದರು.

ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ಮನೆಕೆಲಸದಾಕೆಯೇ ಕಳ್ಳಿ ಎನ್ನುವುದು ಪತ್ತೆಯಾಗಿದ್ದು, ಆಕೆಯಿಂದ 103 ಗ್ರಾಂ ತೂಕದಷ್ಟು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!