Friday, June 5, 2026
spot_imgspot_img
spot_imgspot_img

ಕಾರವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆ – ಕೆಲವೆಡೆ ಹಾನಿ

- Advertisement -
- Advertisement -

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ಶನಿವಾರ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಕೆಲವೆಡೆ ಹಾನಿ ಉಂಟಾಗಿದೆ.

ದ.ಕ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮೂಡುಬಿದಿರೆ, ಮೂಲ್ಕಿ, ಮಂಗಳೂರು, ಪಣಂಬೂರು, ಸುತ್ತಮುತ್ತ ಶನಿವಾರ ಗುಡುಗು ಸಹಿತ ಗಾಳಿ ಮಳೆಯಾಗಿದ್ದು, ಮುಂಡಾಜೆ, ಕಲ್ಮಂಜ ಹಾಗೂ ಪಿಲಿಕಳ ಪ್ರದೇಶದಲ್ಲಿ ವಿದ್ಯುತ್‌ ಲೈನ್‌ ಮೇಲೆ ಮಳೆ-ಗಾಳಿಗೆ ಮರ ಬಿದ್ದ ಪರಿಣಾಮ 4 ಕಂಬಗಳು ಮುರಿದು ಬಿದ್ದಿವೆ.

ಇನ್ನು ಕಡಬ ಪರಿಸರದಲ್ಲಿ ಶನಿವಾರ ಸಂಜೆಯ ಗುಡುಗು ಸಹಿತ ಗಾಳಿ ಮಳೆಗೆ ನೂಜಿಬಾಳ್ತಿಲ ಗ್ರಾಮದ ಪಲಯಮಜಲು ದೇವಸ್ಯ ಅವರ ಮನೆಯ ಮೇಲ್ಛಾವಣಿಯ ಶೀಟು ಹಾರಿ ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ.

ಬಂಟ್ವಾಳದ ಪೆರಾಜೆ ಗ್ರಾಮದ ಸಾದಿಕುಕ್ಕಿನಲ್ಲಿ ಮನೆಗೆ ಸಿಡಿಲು ಬಡಿದು ಮನೆ ಹಾಗೂ ಸೊತ್ತುಗಳಿಗೆ ಹಾನಿಯಾಗಿ ರುವ ಜತೆಗೆ ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

- Advertisement -

Related news

error: Content is protected !!