Sunday, June 21, 2026
spot_imgspot_img
spot_imgspot_img

ಕಾರ್ಕಳ: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ಮೃತಪಟ್ಟ ವ್ಯಕ್ತಿ!

- Advertisement -
- Advertisement -

ಕಾರ್ಕಳ: ತಾಲೂಕಿನ ಪಳ್ಳಿ ಗ್ರಾಮದ ಮಹಾಕಾಳಿ ಮಠದಲ್ಲಿ ತೆಂಗಿನ ಕಾಯಿ ಕೀಳಲು ತೆಂಗಿನ ಮರ ಏರಿದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತವ್ಯಕ್ತಿ ಮಹಾಕಾಳಿ ಮಠ ನಿವಾಸಿ ನಿತ್ಯಾನಂದ ಪ್ರಭು (41) ಎಂದು ತಿಳಿದುಬಂದಿದೆ.

ಮನೆಯ ಸಮೀಪದ ತೆಂಗಿನ ಮರಕ್ಕೆ ತೆಂಗಿನಕಾಯಿ ಕೀಳಲು ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!