Monday, June 8, 2026
spot_imgspot_img
spot_imgspot_img

ಕಾರ್ಕಳ: ಲಾರಿ-ಬೈಕ್‌ ಡಿಕ್ಕಿ; ಬೈಕ್‌ ಸವಾರ ಸ್ಥಳದಲ್ಲೇ ದಾರುಣ ಸಾವು

- Advertisement -
- Advertisement -
vtv vitla

ಕಾರ್ಕಳ: ವೇಗವಾಗಿ ಚಲಿಸುತ್ತಿದ್ದ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕುಕ್ಕುಂದೂರು ಬೋಪಾಡಿ ಎಂಬಲ್ಲಿ ಸಂಭವಿಸಿದೆ.

ಬೈಕ್ ಸವಾರ ಸಲ್ಮಾನ್ ಮೃತ ದುರ್ದೈವಿ. ಕಾರ್ಕಳ ಕಡೆಯಿಂದ ರಂಗನಪಲ್ಕೆ ಕಡೆಗೆ ತೆರಳುತ್ತಿದ್ದ ಲಾರಿಯನ್ನು ಚಾಲಕ ಸಿದ್ಧಿಕ್ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿರುವುದು ಘಟನೆಗೆ ಕಾರಣವಾಗಿದೆ. ಪರಿಣಾಮವಾಗಿ ಲಾರಿಯೂ ಹೋಂಡಾ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.

ಅಪಘಾತದ ತೀವ್ರತೆಗೆ ಬೈಕ್ ಸವಾರ ಸಲ್ಮಾನ್ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ತಲೆಯಲ್ಲಿ ಇದ್ದ ಹೆಲ್ಮೆಟ್ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!