Friday, April 26, 2024
spot_imgspot_img
spot_imgspot_img

ಕಾರ್ಕಳ: ಶ್ರೀ ಮದ್ವ ವಾದಿರಾಜ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಹೊಸ ಅವಿಷ್ಕಾರ

- Advertisement -G L Acharya panikkar
- Advertisement -

vtv vitla
vtv vitla

ಕಾರ್ಕಳ: ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಚಲನೆಗೆ ಸಹಾಯವನ್ನು ಒದಗಿಸುವ ಸಾಧನಗಳಿಗೆ ಆಂಡ್ರಾಯ್ಡ್ ತಂತ್ರಾಂಶವನ್ನು ಬಳಸಿ ವಿನೂತನ ಮಾದರಿಯನ್ನು ಬಂಟಕಲ್‌ನ ಶ್ರೀ ಮದ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಅಭಿವೃದ್ದಿ ಪಡಿಸಿರುತ್ತಾರೆ.

ವಿದ್ಯಾರ್ಥಿಗಳಾದ ನಮನ, ಪ್ರಣವ್, ಆದಿತ್ಯ ಮತ್ತುಗೌರಿ ಇವರುಗಳು ವಿಭಾಗದ ಸಹಪ್ರಾದ್ಯಾಪಕ ಚೇತನ್. ಆರ್ ಇವರ ಮಾರ್ಗದರ್ಶನದಲ್ಲಿ ಹೊಸ ಅವಿಷ್ಕಾರ ನಡೆಸಿದ್ದಾರೆ. ಇವರ ಈ ಯೋಜನೆಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತುತಂತ್ರಜ್ಞಾನ ಪರಿಷತ್‌ನಿಂದ ಪ್ರೋತ್ಸಾಹ ಧನ ದೊರೆತಿದೆ.

ಮನುಷ್ಯನ ದೇಹದಲ್ಲಿ ಮೊಣಕಾಲು ಅಥವಾ ಮಂಡಿ ಒಂದು ಅವಿಭಾಜ್ಯ ಅಂಗ. ಇದರ ಸಹಾಯದಿಂದ ನಮ್ಮ ದೈನಂದಿನ ಚಟುವಟಿಕೆಗಳಾದ ನಡೆದಾಡುವುದು, ನಿಲ್ಲುವುದು ಮತ್ತು ಕುಳಿತುಕೊಳ್ಳುವುದನ್ನು ಮಾಡುತ್ತೇವೆ. ವಯೋಸಹಜವಾಗಿ ಮೂಳೆ ಮತ್ತು ಮಂಡಿ ಸವೆಯುತ್ತದೆ. ಒಂದು ಸಂಶೋಧನೆ ಪ್ರಕಾರ 50 ವರ್ಷ ನಂತರದ ಶೇಕಡಾ ಶೇ. 25ರಷ್ಟು ಜನರು ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದಾರೆ.

ಇನ್ನು ದೇಶದಲ್ಲಿ ಶೇಕಡಾ ಶೇ.15 ರಷ್ಟು ಜನರು ಅಂದರೆ 18 ಕೋಟಿ ಜನ ಈಗಾಗಲೇ ಮಂಡಿ ನೋವಿಗೆ ಶಸ್ತ್ರಚಿಕಿತ್ಸೆ, ಅಲೋಪತಿ ಮತ್ತು ಆಯುರ್ವೇದ ಚಿಕಿತ್ಸೆ ಮಾಡಿಸುತ್ತಿದ್ದಾರೆ. ಈ ಅಂಕಿ ಅಂಶದಲ್ಲಿ ಮಹಿಳೆಯರ ಪಾಲು ಜಾಸ್ತಿ. ಇವರ ಈ ಪ್ರೊಟೋಟೈಪ್ ಯಂತ್ರವು ಸುಲಭವಾಗಿ ನೋವಿರುವ ಮಂಡಿಗೆ ಧರಿಸಿ ಮೊಬೈಲ್ ಆಪ್ ನಿಂದ ಅದನ್ನು ಧ್ವನಿ ಮೂಲಕ ನಿಯಂತ್ರಿಸಬಹುದಾಗಿದೆ. ಈ ಯಂತ್ರವು ನಮಗೆ ಮಂಡಿಗೆ ಬೀಳುವ ದೇಹದ ಶೇ.50ರಷ್ಟು ಭಾರವನ್ನು ನಿಭಾಯಿಸಿ ಉಳಿದ ಭಾರವನ್ನು ಮಂಡಿಗೆ ಬೀಳುವಂತೆ ಮಾಡುವುದರಿಂದ ನೋವು ಶೇ. 50 ರಷ್ಟು ಕಡಿಮೆಯಗುವಂತೆ ಮಾಡುತ್ತದೆ.

vtv vitla
- Advertisement -

Related news

error: Content is protected !!