Friday, April 26, 2024
spot_imgspot_img
spot_imgspot_img

ಕಾಲೇಜಿನ ಪ್ರಿನ್ಸಿಪಾಲ್ ಎಂದು ಯುವತಿ ಜೊತೆ ಸಿಕ್ಕಿ ಬಿದ್ದ ಬಿಜೆಪಿ ಮುಖಂಡ..! ಹನಿಟ್ರ್ಯಾಪ್​ ಕೇಸ್​ಗೆ ಸ್ಫೋಟಕ ತಿರುವು

- Advertisement -G L Acharya panikkar
- Advertisement -

ಬಿಜೆಪಿ ಮುಖಂಡನ ಹನಿಟ್ರ್ಯಾಪ್ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಎಂದು ಯುವತಿಯೊಬ್ಬಳ ಜೊತೆ ಲಾಡ್ಜ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿನ್ನಾಭರಣ ವ್ಯಾಪಾರಿಯಾಗಿರುವ ದಕ್ಷಿಣಕನ್ನಡ ಮೂಲದ ಜಗನ್ನಾಥ ಶೆಟ್ಟಿ ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಇತ್ತೀಚಿಗೆ ಜಗನ್ನಾಥ್​ ಶೆಟ್ಟಿ ನಾಲ್ವರ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್​ ಠಾಣೆಯಲ್ಲಿ ಹನಿಟ್ರ್ಯಾಪ್​ ಕೇಸ್​ ದಾಖಲಿಸಿದ್ದರು. ಈ ಎಫ್​ಐಆರ್​ ನಲ್ಲಿರುವ ಅಂಶಕ್ಕೂ, ವೈರಲ್​ ಆಗಿರುವ ವಿಡಿಯೋಗೂ ಭಾರೀ ವತ್ಯಾಸವಿದೆ.

READ THIS TOO: ಹನಿ ಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಚಿನ್ನದ ಉದ್ಯಮಿ; ದೂರು ದಾಖಲು

ಮೈಸೂರಿನ ದರ್ಶನ್​ ಲಾಡ್ಜ್​ನಲ್ಲಿ ಸಲ್ಮಾ ಎಂಬ ಮಹಿಳೆ ಸೇರಿ ನಾಲ್ವರು ನುಗ್ಗುತ್ತಾರೆ. ಕೋಣೆಯೊಂದರಲ್ಲಿ ಕಾಲೇಜು ಯುವತಿ ಜತೆ ಜಗನ್ನಾಥ್ ಶೆಟ್ಟಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಅದೇ ಕೋಣೆಯಲ್ಲಿ ಜಗನ್ನಾಥ್​ ಶೆಟ್ಟಿ ಹೆರಸಲ್ಲಿ ನಕಲಿ ಐಡಿ ಕಾರ್ಡ್​ ಕೂಡ ಸಿಗುತ್ತೆ. ಅದರಲ್ಲಿ ಕಾಲೇಜಿನ ಪ್ರಿನ್ಸಿಪಾಲ್​ ಜಗನ್ನಾಥ್​ ಶೆಟ್ಟಿ ಎಂದಿರುತ್ತೆ. ಇಬ್ಬರಿಗೂ ಏನು ಕೆಲಸ ಎಂದು ಸಲ್ಮಾರ ತಂಡ ಪ್ರಶ್ನಿಸಿದರೆ, ಇವರು ನಮ್ಮ ಪ್ರಿನ್ಸಿಪಾಲ್​. ಟ್ಯೂಷನ್ ಹೇಳಿಸಿಕೊಳ್ಳೋಕೆ ಅಂತ ಇಲ್ಲಿಗೆ ಬಂದೆ, ಅವರಿಗೇನು ಮಾಡಬೇಡಿ ಪ್ಲೀಸ್​.. ಎಂದು ಯುವತಿ ಗೋಗರೆಯುತ್ತಾರೆ.

ಯುವತಿ ಮತ್ತು ಜಗನ್ನಾಥ್​ ಶೆಟ್ಟಿ ಇಬ್ಬರಿಗೂ ಸಲ್ಮಾ ಗ್ಯಾಂಗ್​ ಥಳಿಸಿದ್ದು, ತಪ್ಪಾಯ್ತು ಬಿಟ್​ಬಿಡಿ ಎಂದು ಜಗನ್ನಾಥ್​ ಕೈಮುಗಿದು ಬೇಡಿದರೂ ಈ ತಂಡ ಬಿಟ್ಟಿಲ್ಲ. ಈ ಎಲ್ಲವನ್ನೂ ಸಲ್ಮಾ ಕಡೆಯವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್​ ಆಗಿದೆ. ಇಷ್ಟೆಲ್ಲಾ ಆದ ಬಳಿಕ ಅಂದು ಲಾಡ್ಜ್​ನಲ್ಲಿ ನಡೆದ ಕೃತ್ಯದ ವಿಡಿಯೋ ವೈರಲ್​ ಆಗಿದೆ. ಜತೆಗೆ ಲಾಡ್ಜ್​ಗೆ ಹೋಗುವ ಮುನ್ನ ಯುವತಿ ಮತ್ತು ಜಗನ್ನಾಥ್​ ಶೆಟ್ಟಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್​ ಆಗಿದೆ.

astr
- Advertisement -

Related news

error: Content is protected !!