
ಕಾಸರಗೋಡು: ಪೊಲೀಸರ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಘಟನೆ ನಗರ ಹೊರವಲಯದ ಅಣಂಗೂರು ಎಂಬಲ್ಲಿ ಇಂದು ರಾತ್ರಿ ನಡೆದಿದ್ದು, ಎಸ್.ಐ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಅಣಂಗೂರಿನ ಬಾರ್ ವೊಂದರಲ್ಲಿ ದಾಂದಲೆ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಸ್ಥಳಕ್ಕೆ ತಲಪಿದ ಕಾಸರಗೋಡು ಪೊಲೀಸರ ಮೇಲೆ ತಂಡವು ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಹಲ್ಲೆ ನಡೆಸಿದ್ದು ನಾಲ್ವರು ಪೊಲೀಸರು ಗಾಯಗೊಂಡರು. ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನನ್ನು ಆಲೂರು ನಿವಾಸಿ ಮುನೀರ್ ಎಂದು ಗುರುತಿಸಲಾಗಿದೆ. ಈತ ಹಲವು ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆಯಿಂದ ನಗರ ಠಾಣಾ ಸಬ್ ಇನ್ಸ್ ಪೆಕ್ಟರ್ ವಿಷ್ಣು ಪ್ರಸಾದ್, ಚಾಲಕ ಸಜಿತ್, ಸನೀಶ್ ಹಾಗೂ ಬಾಬು ರಾಜ್ ಗಾಯಗೊಂಡಿದ್ದಾರೆ .ಸ್ಥಳಕ್ಕೆ ತಲಪಿದ ಪೊಲೀಸರ ಮೇಲೆ ಕಾರಿನ ವೈಫರ್ ನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಹರಸಾಹಸ ಪಟ್ಟು ಆರೋಪಿಯ ನ್ನು ವಶಕ್ಕೆ ಪಡೆದು ಕೊಳ್ಳ ಲಾಯಿತು..ಕಾರಿನ ಗಾಜನ್ನು ಹುಡಿ ಮಾಡಿದ ಈತ ವೈಫರ್ ತೆಗೆದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ಪೊಲೀಸರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆರೋಪಿ ಮುನೀರ್ ವಿರುದ್ದ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮೊದಲಾದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.











