Sunday, June 28, 2026
spot_imgspot_img
spot_imgspot_img

ಕಾಸರಗೋಡು: ಕರ್ತವ್ಯ ಲೋಪ; ಸಹಾಯಕ ಇಂಜಿನಿಯರ್ ಅಮಾನತು

- Advertisement -
- Advertisement -

ಕಾಸರಗೋಡು: ಕರ್ತವ್ಯ ಲೋಪ ಎಸಗಿದ ಕೇರಳ ರಸ್ತೆ ನಿಧಿ ಮಂಡಳಿ ಯೋಜನಾ ಮಂಡಳಿ ಕಾಸರಗೋಡು ವಲಯ ಸಹಾಯಕ ಇಂಜಿನಿಯರ್ ಕೆ.ಝೀನತ್ ಬೀಗಂರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.

ಎರಡು ದಿನಗಳ ಹಿಂದೆ ಕಾಸರಗೋಡಿನಲ್ಲಿ ನಡೆದ ಅವಲೋಕನಾ ಸಭೆಯಲ್ಲಿ ಬೀಗಂರನ್ನು ಲೋಕೋಪಯೋಗಿ ಸಚಿವ ಪಿ.ಎ ಮುಹಮ್ಮದ್ ರಿಯಾಜ್ ತರಾಟೆಗೆ ತೆಗೆದುಕೊಂಡಿದ್ದರು.

ಕರ್ತವ್ಯಲೋಪದಿಂದ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಗಳು ವಿಳಂಬಗೊಳ್ಳುತ್ತಿದೆ. ಕಾಮಗಾರಿಗೆ ಅಡ್ಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಚಿವರು ಆದೇಶ ನೀಡಿದ್ದರು. ವರದಿ ಪರಿಶೀಲಿಸಿದ ಇಂಜಿನಿಯರ್ ರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

- Advertisement -

Related news

error: Content is protected !!