Sunday, May 19, 2024
spot_imgspot_img
spot_imgspot_img

ಕಾಸರಗೋಡು: ಕಾರಿನಲ್ಲಿ ಮಾದಕ ವಸ್ತು ಸಾಗಾಟ; ಮೂವರ ಬಂಧನ..!

- Advertisement -G L Acharya panikkar
- Advertisement -

ಕಾಸರಗೋಡು: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಮೂವರನ್ನು ಬೇಕಲ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಕಳ್ನಾಡಿನ ಅರವಿಂದ ಮುರಳಿ ( 21), ಮಂಜೇಶ್ವರ ಕುಂಜತ್ತೂರಿನ ಅಬ್ದುಲ್ ಖಾದರ್ ಅಝೀಮ್ (32) ಮತ್ತು ಉಳಿಯತ್ತಡ್ಕದ ಮುಹಮ್ಮದ್ ಯಾಸಿನ್ ( 20 ) ಬಂಧಿತರು.

ಇವರಿಂದ 50 ಗ್ರಾಂ ಗಾಂಜಾ, ಮಾದಕ ವಸ್ತು ಒಳಗೊಂಡ ಸ್ಟ್ಯಾಂಪ್ ಮೊದಲಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಕಳ್ನಾಡ್‌‌ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

- Advertisement -

Related news

error: Content is protected !!