Sunday, May 5, 2024
spot_imgspot_img
spot_imgspot_img

ಯತ್ನ ಭಾಗ್ಯವಿಧಾತ – ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ಬಾಣವಿಲ್ಲದೆ ಬಿಲ್ಲ ಬಳಸಿ ಗೆಲ್ಲುವೆ ಎಂತು?
ಕುದುರೆಯಿಲ್ಲದೆ ರಥವ ಓಡಿಸುವೆ ಎಂತು?
ಸಂಕಲ್ಪವಿಲ್ಲದೆಯೇ ಜಯವ ಗಳಿಸುವೆ ಎಂತು ದಕ್ಷ ಸಾರಥಿಯಾಗು – ಮುದ್ದು ರಾಮ

ಪ್ರಯತ್ನ ಶೀಲತೆಯನ್ನು ಮರೆತು ಪವಾಡದಿಂದ ಯಾವ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಹಾಗಾದರೂ ಒಂದು ವೇಳೆ, ನಿರ್ವಹಣೆಯಲ್ಲಿ ಬಹಳ ಬಾರಿ ಎಡವಿ ಬೀಳುವುದನ್ನು ಕಾಣುತ್ತೇವೆ. ಯಾಕೆಂದರೆ ಓಡಿ ಅನುಭವವಿಲ್ಲದೆ ಯಾರದೋ ಶ್ರಮವನ್ನು ಬಾಚಿ ಪಡೆದುದರ ಫಲವದು. ಓಡದೆಯೇ ಪಂದ್ಯದಲಿ ಕೊರಳಿಗೊಲಿವುದೆ ಪದಕ?

ಯತ್ನ ಮಾಡುವುದಕ್ಕಿಂತ ಮೊದಲು ಅವಕಾಶದ ಬಗೆಗೆ ನೂರು ಬಾರಿ ಯೋಚಿಸಬೇಕು. ಅವಕಾಶವೆನ್ನುವುದು ಒಂದು ಬಾಗಿಲಿನ ಆಚೆ ಕಡೆ ಇರುವ ಶಕ್ತಿ. ಅದು ಯಾವಾಗ ಬೇಕಾದರೂ ಆ ಬಾಗಿಲನ್ನು ತಟ್ಟಬಹುದು, ಆದರೆ ಅದು ತಟ್ಟಲಿದೆ ಎಂದು ನಾವು ಕಾಯುವ ಅಗತ್ಯ ಇಲ್ಲ. ನಮಗೆ ಸಿಗುವ ಅವಕಾಶಗಳಿಗಿಂತ ನಾವೇ ಸೃಷ್ಟಿಸಿಕೊಳ್ಳಲಾಗುವ ಅವಕಾಶದ ಹಾದಿಗಳು ನಮ್ಮ ಬದುಕಿನಲ್ಲಿ ಮಹತ್ತರ ವ್ಯತ್ಯಾಸ ತಂದೀತು. ನಾವೆಂದೂ ಪರಿಪೂರ್ಣರಲ್ಲ, ಪೂರ್ಣತೆಯೆಡೆಗೆ ಸಾಗುವ ಸಾಧನೆ ನಮ್ಮನ್ನು ತಾನಾಗಿಯೇ ಆಲಂಗಿಸಿಕೊಳ್ಳುತ್ತದೆ. ಕೆಲವೊಮ್ಮೆ ವಿಧಿಯೂ ಯಾರು ಧೈರ್ಯವಂತರಾಗಿ ಸಾಗುತ್ತಾರೋ ಅವರಿಗೇ ಸಹಾಯ ಮಾಡುತ್ತದೆ. ನಿನ್ನೆಯ ಕನಸು, ಇಂದಿನ ಭರವಸೆ ಮತ್ತು ನಾಳಿನ ವಾಸ್ತವಿಕತೆ ಈ ಮೂರರಲ್ಲಿ ಯಾವುದು ಅಸಾಧ್ಯ ಎಂದು ಹೇಳುವುದು ಕಷ್ಟ. ಯತ್ನಕ್ಕೆಎಂದೂ ಪೂರ್ಣವಿರಾಮವಿಲ್ಲ. ಅದು ನಾವಿರುವಲ್ಲೇ ಓಡುತ್ತಲೇ ಇರಬೇಕು, ಇಲ್ಲದಿದ್ದರೆ ಬೇರೊಬ್ಬ ಸ್ಪರ್ಧಿ ನಮ್ಮನ್ನು ದಾಟಿಕೊಂಡು ಹೋಗಿಬಿಡುತ್ತಾನೆ, ಈ ಸ್ವಾರ್ಥ ಪರತೆಗಾಗಿಯಾದರೂ ಯತ್ನ ಸಾಗಲಿ.
ನಾವು ಒಂದು ಬಲವಾದ ಉದ್ದೇಶಕ್ಕಾಗಿ ಜೀವಿಸುವಾಗ ಶ್ರಮವೆನ್ನುವುದು ಒಂದು ಆಯ್ಕೆಯಾಗಿ ಉಳಿಯುವುದಿಲ್ಲ. ಅದು ಅವಶ್ಯಕತೆಯಾಗಿ ಬದಲಾಗುತ್ತದೆ ಎಂಬ ಮಾತುಗಳು ಗಮನಾರ್ಹ. ನಮ್ಮ ಯಶಸ್ಸು ನಾವೆಷ್ಟು ಕಷ್ಟ ಪಡಲು ಸಿದ್ದ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ತೊಡಕುಗಳು ಸದಾ ಇರುತ್ತದೆ ನಾವು ಯಶಸ್ಸು ಗಳಿಸುವ ಬಗ್ಗೆ ಅವಮಾನಿಸುವವರು ಇದ್ದೇ ಇರುತ್ತಾರೆ. ತಪ್ಪುಗಳು ಆಗುತ್ತಲೇ ಇರುತ್ತವೆ ಆದರೆ ಶ್ರಮದೊಂದಿಗೆ ಯಾವುದಕ್ಕೂ ಮಿತಿ ಇರುವುದಿಲ್ಲ. ಯಾರೇ ಆಗಲಿ ತಮ್ಮ ಕೆಲಸದಿಂದ ಹಿಮ್ಮೆಟ್ಟದಿದ್ದರೆ ಅವರನ್ನು ಸೋಲಿಸುವುದು ಬಹಳ ಕಷ್ಟ. ನಾವು ಯಶಸ್ಸನ್ನು ಸಾಧಿಸಿದರೆ ನಮಗೆ ಶ್ಲಾಘನೆ ಸಿಗುತ್ತದೆ ನಮಗೆ ಶ್ಲಾಘನೆ ಸಿಕ್ಕಿದ್ದನ್ನು ಖಂಡಿತ ಆನಂದಿಸೋಣ . ಆದರೆ ಅದನ್ನು ಪೂರ್ಣವಾಗಿ ನಂಬಬೇಡಿ ಶ್ಲಾಘನೆಯ ಸುತ್ತಮುತ್ತ ಮತ್ಸರ, ತಾತ್ಸಾರ ಹೊಂದಿಸಿ ಕೊಂಡ ಕಲುಷಿತ ಹೃದಯಗಳು ಗೂಗೆಗಳಂತೆ ವಟಗುಟ್ಟುತ್ತಿರುತ್ತದೆ. ಮತ್ತು ನಮ್ಮ ಯಶಸ್ಸಿಗೆ ಕುಟ್ಟುವ ಯತ್ನಕ್ಕೆ ತೊಡಗುತ್ತದೆ ಆದರೆ ಒಂದಂತೂ ಗಮನಿಸಬೇಕು.

ಏನಾಗಬೇಕೆಂದಿರುವೆಯೋ ಅದಾಗಲೂ ಎಂದಿಗೂ ತಡವಿಲ್ಲ. ಯಾವುದಕ್ಕೂ ನಾವು ಪಶ್ಚಾತಾಪ ಪಡಬೇಕಾಗಿಲ್ಲ ಅದಕ್ಕಾಗಿ ಯಾವುದೇ ಸುಳ್ಳು ನೆಪಗಳು ಬೇಡ ಇನ್ನೂ ಚೆನ್ನಾಗಿ ಆಟವಾಡೋಣ, ಬದುಕೋಣ, ಪ್ರೀತಿಸೋಣ, ನಗುತಿರೋಣ ಒಟ್ಟಿನಲ್ಲಿ ಬದುಕಿನಲ್ಲಿ ಮೇಲೆ ಬರೋಣ. ಕಷ್ಟಪಡದೆ ಯಶಸ್ವಿಗಾಗಿ ಆಶಿಸುವುದು ಹೇಗಿರುತ್ತದೆಂದರೆ ನಾವು ಬೆಳೆಯನ್ನು ನೆಡದೆ ಆ ಜಾಗದಲ್ಲಿ ಸುಗ್ಗಿಗಾಗಿ ಪ್ರಯತ್ನಿಸಿದಂತೆ.

ನಮ್ಮಲ್ಲಿ ಪ್ರತಿಬೆ ಇರಬಹುದು. ಆದರೆ ಅದು ಹೊರ ಬಿದ್ದರೆ ಮಾತ್ರ ನಾವು ಯಶಸ್ಸು ಗಳಿಸಬಹುದು. ಇಲ್ಲದಿದ್ದರೆ ಮಣ್ಣಿನಲ್ಲಿ ಹೂತುಹೋದ ವಜ್ರದಂತೆ ಅದು ಗುಪ್ತವಾಗಿ ಇದ್ದುಬಿಡುತ್ತದೆ. ಆದ್ದರಿಂದ ಪ್ರತಿಭೆ ಕಷ್ಟ ಪಡದಿದ್ದಾಗ, ಶ್ರಮ ಪ್ರತಿಭೆಯನ್ನು ಗೆಲ್ಲುವುದು. ಶ್ರಮಕ್ಕೆ ಪರ್ಯಾಯವೇ ಇಲ್ಲ.
ಯತ್ನದ ಭಾಗ್ಯ ದೊರೆತಾಗ ಮನುಷ್ಯನಲ್ಲಿ ಅದು ಬದಲಾವಣೆ ತರಬಹುದು.

ಕೊನೆಗೊಂದು ಮಾತು, ಯತ್ನ ಹಿಡಿದು ಸಾಗಿದಾಗ, ಮುಂದೆ ಹಾದಿ ಇಲ್ಲ ಎನ್ನುವ ಸಮಸ್ಯೆ ಬರಬಹುದು.ದಾರಿ ಇಲ್ಲ ಎಂದು ನಡೆಯುವುದನ್ನೇ ನಿಲ್ಲಿಸಬಾರದು. ನಾವು ನಡೆದದ್ದೇ ದಾರಿ ಆಗಬಹುದು, ಆ ದಾರಿ ನಾಲ್ಕು ಜನಕ್ಕೆ ಸ್ಪೂರ್ತಿ ಆಗಬಹುದು.

” ಕಾರ್ಯಂ ವೇ ಸಿದ್ಧಿಮಾಯಾತು ಪ್ರಸನ್ನೇ ತ್ವಯಿಧಾತರಿ| ವಿಘ್ನಶ್ಚ ನಾಶ ಮಾಯಂತು ಸರ್ವೇತೇ ಗಣನಾಯಕ | ಹೇ ಗಣ ನಾಯಕ, ಎಲ್ಲರನ್ನೂ ಉದ್ದರಿಸುವ ನೀನು ಪ್ರಸನ್ನನಾಗಲು ನನ್ನ ಕಾರ್ಯಗಳು ಸಿದ್ದಿಸಲಿ. ಎಲ್ಲಾ ವಿಘ್ನ ನಾಶವಾಗಲಿ “. ವಿಘ್ನ ಕರ್ತೃ, ವಿಘ್ನಹರ ಎರಡರ ಉಪಾದಿಯೂ ಆದ ಶ್ರೀ ಗಣೇಶ ಯಶಸ್ಸಿನ ಕಾಲೆಳೆಯುವ ಹಾಗೇ ಯಶಸ್ಸಿನ ಹಾದಿ ತೋರುವ ಎರಡು ವರ್ಗಕ್ಕೂ ಒಳ್ಳೆಯ ಮನಸ್ಸು ಕೊಡಲಿ.

- Advertisement -

Related news

error: Content is protected !!