Monday, June 22, 2026
spot_imgspot_img
spot_imgspot_img

ಕಾಸರಗೋಡು: ದಾಂಪತ್ಯದಲ್ಲಿ ವಿರಸ, ಬಿರುಕು ತಪ್ಪಿಸಲು ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯ

- Advertisement -
- Advertisement -
suvarna gold

ಕಾಸರಗೋಡು: ದಾಂಪತ್ಯದಲ್ಲಿ ವಿರಸ, ಬಿರುಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯಗೊಳಿಸುವ ಬಗ್ಗೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿರುವುದಾಗಿ ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಪಿ. ಸತಿದೇವಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಆಯೋಗ ಅದಾಲತ್ ನಲ್ಲಿ ಅವರು ಮಾತನಾಡುತ್ತಿದ್ದರು. ವಿವಾಹ ನೋಂದಣಿ ಈಗ ಅನಿವಾರ್ಯವಾಗಿದೆ. ಇದರ ಜೊತೆಗೆ ದಂಪತಿಗೆ ವಿವಾಹ ಪೂರ್ವ ಕೌನ್ಸಿಲಿಂಗ್ ಕಡ್ಡಾಯಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

vtv vitla
vtv vitla

ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಗಳಿಗೆ ಕಲಾಲಯ ಜ್ಯೋತಿ, ಫೇಸ್ ಟು ಫೇಸ್ ಕಾರ್ಯಕ್ರಮಗಳ ಮೂಲಕ ಕೌನ್ಸಿಲಿಂಗ್ ನೀಡಲಾಗುವುದು. ಕೌಟುಂಬಿಕ ಸಮಸ್ಯೆಗಳ ಇತ್ಯರ್ಥಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಖಾಯಂ ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗುವುದು. ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ಪ್ರತಿ ತಿಂಗಳು ಸಭೆ ಕರೆದು ಆಯಾ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.

32 ದೂರುಗಳಲ್ಲಿ 13 ದೂರುಗಳನ್ನು ಇತ್ಯರ್ಥ ಗೊಳಿಸಲಾಯಿತು. ನಾಲ್ಕು ದೂರುಗಳ ಬಗ್ಗೆ ಪೊಲೀಸರ ವರದಿ ಕೇಳಲು ತೀರ್ಮಾನಿಸಲಾಯಿತು. 15 ದೂರುಗಳ ಬಗ್ಗೆ ಮುಂದಿನ ಅದಾಲತ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಯಿತು.

vtv vitla
vtv vitla
- Advertisement -

Related news

error: Content is protected !!