Tuesday, April 30, 2024
spot_imgspot_img
spot_imgspot_img

ಕಾಸರಗೋಡು: ನೋಡು ನೋಡುತ್ತಿದ್ದಂತೆ ಧರೆಗುರುಳಿದ ಕಟ್ಟಡ; ತಪ್ಪಿದ ಭಾರೀ ಅನಾಹುತ

- Advertisement -G L Acharya panikkar
- Advertisement -

ಕಾಸರಗೋಡು: ಕಟ್ಟಡವೊಂದು ನೋಡು ನೋಡುತ್ತಿದ್ದಂತೆ ಧರಾಶಾಹಿಯಾದ ಘಟನೆ ಭಾನುವಾರ ನಡೆದಿದೆ. ಮಂಜೇಶ್ವರ ಸಮೀಪದ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಈ ಕಟ್ಟಡದಲ್ಲಿ ಬಿರುಕು ಕಂಡು ಬಂದು ಕೆಲವು ದಿನಗಳಾಗಿದ್ದು , ಅದರಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಈ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬಿಜೆಪಿ ಸಮಿತಿ, ಧರ್ಮಸ್ಥಳ ಸಂಘ, ಒಡಿಯೂರು ಸಂಘ ಮುಂತಾದ ಕಚೇರಿಗಳು ಸಹಿತ ಇನ್ನಿತರ ಹಲವು ಮಳೆಗೆಗಳು ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದವು. ಆದರೆ ಈ ಹಿಂದೆಯೇ ಎಲ್ಲಾ ಕಚೇರಿ, ಮಳಿಗೆಗಳನ್ನು ತೆರವುಗೊಳಿಸಿ ಯಾವುದೇ ದುರಂತಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಬೇಕರಿ ಜಂಕ್ಷನ್ ನ ಸುರೇಂದ್ರ ನಲ್ಲೆಂಗಿ ಎಂಬವರಿಗೆ ಸೇರಿದ ಕಟ್ಟಡ ಇದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!