Tuesday, June 23, 2026
spot_imgspot_img
spot_imgspot_img

ಕಾಸರಗೋಡು: ಮನೆ ಬಾಗಿಲು ಮುರಿದು 1.36 ಲಕ್ಷ ನಗದು ಸಹಿತ ಚಿನ್ನಾಭರಣ ಕಳ್ಳತನ

- Advertisement -
- Advertisement -

ಕಾಸರಗೋಡು: ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಚಿನ್ನ ನಗದು ಕಳ್ಳತನ ನಡೆಸಿದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳದಲ್ಲಿ ನಡೆದಿದೆ.

vtv vitla
vtv vitla

ಫಿರ್ದೋಸ್ ನಗರದ ಶೇಖ್ ಇಬ್ರಾಹಿಂ ರವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕುಟುಂಬ ವು ಮುಂಬೈ ಯಲ್ಲಿ ವಾಸವಾಗಿದೆ. ಜನವರಿಯಲ್ಲಿ ಊರಿಗೆ ಬಂದು ಮರಳಿದ್ದರು. ಗುರುವಾರದಂದು ಮನೆಯ ಎರಡನೇ ಅಂತಸ್ತಿನ ಬಾಗಿಲು ತೆರೆದಿರುವುದು ಗಮನಿಸಿದ ಸಂಬಂಧಿಕರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ತಪಾಸಣೆ ನಡೆಸಿದಾಗ ಮನೆಯ ಎರಡನೇ ಅಂತಸ್ತಿನ ಬಾಗಿಲು ಒಡೆದು ಕಳ್ಳರು ಒಳನುಗ್ಗಿ ಕೃತ್ಯ ನಡೆಸಿದ್ದಾರೆ.

ಕಪಾಟಿನಲ್ಲಿರಿಸಲಾಗಿದ್ದ ಎಂಟು ಪವನ್ ಚಿನ್ನಾಭರಣ ಚಿನ್ನಾಭರಣ ಮತ್ತು 1. 36 ಲಕ್ಷ ರೂನಗದು ಕಳವು ಮಾಡಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!