Tuesday, June 23, 2026
spot_imgspot_img
spot_imgspot_img

ಕಾಸರಗೋಡು: ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮೃತ್ಯು..!!

- Advertisement -
- Advertisement -

ಕಾಸರಗೋಡು: ಸುಟ್ಟ ಗಾಯಗಳಿಂದ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರನ್ನು ಕಾಞಂಗಾಡ್ ಪಡನಕ್ಕಾಡ್ ನೆಹರೂ ಕಾಲೇಜಿನ ಪದವಿ ವಿದ್ಯಾರ್ಥಿನಿ ಪಿ.ರಶ್ಮಿ (23) ಎಂದು ಗುರುತಿಸಲಾಗಿದೆ.

ಕೆ ರತ್ನಾಕರನ್ ಮತ್ತು ಪಿ ಪುಷ್ಪಾ ಅವರ ಪುತ್ರಿಯಾಗಿರುವ ರಶ್ಮಿ ಜನವರಿ 21 ರಂದು ಮುಳಿಯಾರು ಬರ್ಕಾದಲ್ಲಿರುವ ತನ್ನ ಚಿಕ್ಕಪ್ಪನ ಮನೆಯಲ್ಲಿ ಅಡುಗೆ ಮಾಡುವಾಗ ಸುಟ್ಟು ಗಾಯಗೊಂಡಿದ್ದರು. ಗಂಭೀರ ಗಾಯಗೊಂಡ ರಶ್ಮಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!